neನವಜಾತ ಶಿಶುವಿನ ಕಳೇಬರವೊಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಾಯಿಯ ಬಾಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನಾಯಿಯನ್ನು ಗಮನಿಸಿ ಪೋಲೀಸರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಪುತ್ತೂರ ನಗರ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ ನವಜಾತ ಶಿಶುವಿನ ಕಳೇಬರವನ್ನು ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆಯ ಆವರಣದಲ್ಲೇ ಹೂತಿದ್ದು, ನಾಯಿಗಳು ಇದನ್ನು ಹೊರ ತೆಗೆಯುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಪೋಲೀಸರು ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಿದ್ದಾರೆ. ಹತ್ತು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಲ್ಲುಗುಂಡಿಯ ಬಡ ಕುಟುಂಬಕ್ಕೆ ಸೇರಿದ ಶಿಶು ಇದಾಗಿದೆಯೆಂದು ತಿಳಿದುಬಂದಿದ್ದು, ಧಫನಕ್ಕೆ ಹಣವಿಲ್ಲದ ಕಾರಣ ಸಿಬ್ಬಂದಿಗಳೇ ಆಸ್ಪತ್ರೆಯ ಆವರಣದಲ್ಲಿ ಹೂತಿದ್ದರು ಎನ್ನುವ ಮಾಹಿತಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

Facebook Comments

comments