ಮಂಗಳೂರು,ಜುಲೈ.20 : ಪೋಲಿಸ್ ಜೀಪ್ ಮತ್ತು ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ ಹೊಡೆದ ಘಟನೆ ಮಂಗಳೂರಿನ ಕೊಟ್ಟಾರ ಸರ್ವಿಸ್ ರಸ್ತೆಯಲ್ಲಿಂದು ಸಂಭವಿಸಿದೆ. ಪರಿಣಾಮ ಎರಡು ದ್ವಿಚಕ್ರ ವಾಹಗಳು ಜಖಂ ಗೊಂಡಿದ್ದು, ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಬ್ಬರು ಗಾಯಗೊಂಡಿದ್ದಾರೆ.

ಮಂಗಳೂರು ಬಂದೋಬಸ್ತಿಗಾಗಿ ಬಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಡಿವೈ ಎಸ್ ಪಿ ಗೆ ಸೇರಿದ ಸರ್ಕಾರಿ ವಾಹನ ಇದಾಗಿದ್ದು, ದ್ವಿಚಕ್ರವಾಹನ ಸವಾರರು ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದ್ದು, ಉತ್ತರ ವಿಭಾಗದ ಸಂಚಾರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.