LATEST NEWS
ದೀಪಿಕಾ ಪಡುಕೋಣೆ ತಲೆ ಕತ್ತರಿಸಿದರೆ 10 ಕೋಟಿ – ಹರಿಯಾಣ ಬಿಜೆಪಿ ಮುಖಂಡ

ದೀಪಿಕಾ ಪಡುಕೋಣೆ ತಲೆ ಕತ್ತರಿಸಿದರೆ 10 ಕೋಟಿ – ಹರಿಯಾಣ ಬಿಜೆಪಿ ಮುಖಂಡ
ಮುಂಬೈ ನವೆಂಬರ್ 20: ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ವಿವಾದಾತ್ಮಕ ಚಿತ್ರ ಪದ್ಮಾವತಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ದೇಶಾದ್ಯಂತ ನಡೆದ ತೀವ್ರ ಪ್ರತಿಭಟನೆಯ ಅಂಗವಾಗಿ ಒತ್ತಡಕ್ಕೆ ಮಣಿದ ನಿರ್ಮಾಣ ಸಂಸ್ಥೆ ವೈಕಾಮ 18 ಮೋಷನ್ ಪಿಕ್ಚರ್ಸ್ ಪದ್ಮಾವತಿ ಬಿಡುಗಡೆಯನ್ನು ಮುಂದೂಡಿದೆ.
ಚಿತ್ರದಲ್ಲಿ ಐತಿಹಾಸಿಕ ರಾಣಿ ಪದ್ಮಾವತಿಯ ಬಗ್ಗೆ ಅವಹೇಳನಕಾರಿ ಚಿತ್ರಿಸಲಾಗಿದೆ ಎಂದು ರಾಜಸ್ಥಾನದ ಕಾರ್ನಿ ಸೇನೆ ಸೇರಿದಂತೆ ದೇಶಾದ್ಯಂತ ಹಲವಾರು ಸಂಘಟನೆಗಳು ಆರೋಪಿಸಿವೆ.ಹಾಗೂ ಚಿತ್ರವನ್ನು ನಿಷೇಧಿಸುವಂತೆ ಸರ್ಕಾರಗಳನ್ನು ಒತ್ತಾಯಿಸಿವೆ.
ಜೈಪುರ ಮುಂಬೈ ಬೆಂಗಳೂರು ಮುಂತಾದೆಡೆ ಚಿತ್ರದ ಬಿಡುಗಡೆ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಬನ್ಸಾಲಿ ಅವರ ತಲೆ ಕತ್ತರಿಸಿದರೆ ಹತ್ತು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಹರಿಯಣದ ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ.

ದೀಪಿಕಾ ಪಡುಕೋಣೆ ಅವರ ಮೂಗು ಕತ್ತರಿಸುವುದಾಗಿ ಕರ್ನಿ ಸೇನಾ ಬೆದರಿಕೆ ಹಾಕಿದ ಬೆನ್ನಲ್ಲೇ ಬಿಜೆಪಿಯ ಮುಖ್ಯ ಮಾಧ್ಯಮ ಸಂಚಾಲಕ ಸೂರಜ್ ಪಾಲ್ ಅವರು ಘೋಷಣೆ ಮಾಡಿದ್ದಾರ. ಇನ್ನೊಂದೆಡೆ ದೀಪಿಕಾ ಅವರನ್ನು ಸಜೀವ ದಹನ ಮಾಡಿದರೆ ಅಂಥವರಿಗೆ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಉತ್ತರಪ್ರದೇಶ ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ಸದಸ್ಯರು ಘೋಷಿಸಿದ್ದಾರೆ.
ಇವುಗಳ ನಡುವೆ ಪದ್ಮಾವತಿ ಚಿತ್ರತಂಡದ ಬೆಂಬಲಕ್ಕೆ ಬಂದಿರುವ ಹಿರಿಯ ನಟಿ ಶಬನಾ ಆಜ್ಮಿ ಪದ್ಮಾವತಿ ಚಿತ್ರ ತಂಡಕ್ಕೆ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು ರಾಜಸ್ಥಾನ ಉತ್ತರಪ್ರದೇಶ ಗುಜರಾತ್ ಸರ್ಕಾರಗಳು ಚಿತ್ರದ ಬಿಡುಗಡೆ ಮುಂದೂಡುವಂತೆ ಉದ್ದೇಶಪೂರ್ವಕವಾಗಿ ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿವೆ ಎಂದು ಆರೋಪಿಸಿದ್ದಾರೆ .