2666a58c-5e40-40e0-bc41-c9fbdc04834b ಪುತ್ತೂರು ನಗರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 50 ಲಕ್ಷ ಮೌಲ್ಯದ ನಿಷೇಧಿತ 500 ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. deb32812-96cc-42f4-83f8-80d0af77da44ನಗರ ಪೋಲೀಸರು ಪುತ್ತೂರಿನ ಉರ್ಲಾಂಡಿ ಬಳಿ ಕಾರು ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಡಿಕೇರಿಯಿಂದ ಮಾಣಿ ಕಡೆಗೆ ಸಾಗುತ್ತಿದ್ದ ಕಾರಿನಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೋಲೀಸರು ವಳಾಲು ನಿವಾಸಿ ಮಹಮ್ಮದ್ ಸಿರಾಜ್(34), ಅಬ್ದುಲ್ ಶಾರಿಕ್(29), ಬೆದ್ರೋಡಿ ನಿವಾಸಿ ನಿಸಾರ್(28) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಉಪ್ಪಿನಂಗಡಿಯಲ್ಲಿ ಹಳೆ ನೋಟುಗಳನ್ನು ಬದಲಾಯಿಸಲೆಂದು ಕೊಂಡೊಯ್ಯಲಾಗುತ್ತಿದ್ದು, ಮಡಿಕೇರಿ ಮೂಲದ ಉದ್ಯಮಿಗೆ ಸೇರಿದ ಹಣವೆಂದು ಬಂಧಿತರು ಪೋಲೀಸರಿಗೆ ತಿಳಿಸಿದ್ದಾರೆ.

Facebook Comments

comments