Connect with us

DAKSHINA KANNADA

ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶಾಂತಿ ಸಭೆ

Share Information

ಮಂಗಳೂರು ಜುಲೈ 13 – ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಉಂಟಾಗಿರುವಂತಹ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶಾಂತಿ ಸಭೆ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪಕ್ಷಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ನೇರವಾಗಿ ಪ್ರಚೋದನಾಕಾರಿ ಭಾಷಣ ಮಾಡುತ್ತಿರುವ ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಜಿಲ್ಲೆಯ ಕೋಮ ಸಾಮರಸ್ಯ ಹಾಳಾಗಲು ಕಾರಣ ಎನ್ನುವ ಸೂಚನೆಯನ್ನೂ ಜಿಲ್ಲಾಡಳಿತಕ್ಕೆ ನೀಡಿದೆ. ಅಹಿತಕರ ಘಟನೆ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ವಿವಿಧ ರಾಜಕೀಯ ಮುಖಂಡರು, ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಗೆ ಆಗಮಿಸಿದ ಜೆಡಿಎಸ್ ಪಕ್ಷವು ಸಭೆ ಆರಂಭಗೊಂಡ ಬಳಿಕ ಸಭೆಯನ್ನು ಬಹಿಷ್ಕರಿಸಿ ಹೊರ ನಡೆಯಿತು. ಅದೇ ಪ್ರಕಾರ ಬಿಜೆಪಿ ಪಕ್ಷವೂ ಕೂಡಾ ಸಭೆಯಿಂದ ದೂರ ಉಳಿದಿದ್ದು, ಬಿಜೆಪಿ ಪಕ್ಷದ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲಾ ಪಕ್ಷ ಹಾಗೂ ಸಂಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಬಿಜೆಪಿ ಹಾಗೂ ಸಂಘಪರಿವಾರಗಳೇ ಕಾರಣ ಎನ್ನುವ ಆರೋಪವನ್ನು ಮಾಡಿದವು.

ಇದೇ ಸಂದರ್ಭದಲ್ಲಿ ಸಭೆಯಲ್ಲಿದ್ದ ನಾಗರಿಕರೊಬ್ಬರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ವಿಧ್ಯಾಮಾನಗಳಿಗೆ ಗೃಹಖಾತೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದರು. ಅಲ್ಲದೆ ಗೃಹಖಾತೆ ಸಹಾಯಕರಾಗಿರುವ ಕೆಂಪಯ್ಯ ಅವರನ್ನು ಭ್ರಷ್ಟ ಎಂದರಲ್ಲದೆ, ಅಂಥವರ ಕೈಯಲ್ಲಿ ಗೃಹಖಾತೆ ನಡೆಸಿದರೆ, ಶಾಂತಿ ಮರುಸ್ಥಾಪಿಸುವುದು ಕಷ್ಟ ಎನ್ನುವ ಸಲಹೆಯನ್ನೂ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕೆಲವು ಕೋಮುವಾದಿ ಸಂಘಟನೆಗಳು ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕದಡುವಂತಹ ಪ್ರಯತ್ನವನ್ನು ನಿಯೋಜಿತ ರೀತಿಯಲ್ಲಿ ಮಾಡುತ್ತಿದ್ದು, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರಲ್ಲದೆ, ಪೋಲೀಸ್ ಇಲಾಖೆ ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕೆಂದೂ ಸೂಚಿಸಿದರು.

ಒಟ್ಟಾರೆಯಾಗಿ ಇಂದು ನಡೆದ ಶಾಂತಿ ಸಭೆಯಲ್ಲಿ ಜಿಲ್ಲೆಯಲ್ಲಿ ನೆಲೆಯಾಗಬೇಕಾದ ಶಾಂತಿಯ ವಿಷಯ ಬಿಟ್ಟು , ಅಶಾಂತಿಯ ವಿಷಯವೇ ಹೆಚ್ಚಾಗಿ ಚರ್ಚೆಗೆ ಬಂದಿತ್ತು. ನಿರ್ಧಿಷ್ಟ ಸಂಘಟನೆಯನ್ನು ಸಭೆಯಲ್ಲಿ ಸೇರಿದ್ದ ಎಲ್ಲಾ ಪಕ್ಷಗಳು ಹಾಗೂ ಸಂಘಟನೆಗಳು ಒಗ್ಗಟ್ಟಿನಿಂದ ದೂರಿದವಲ್ಲದೆ, ಆ ಸಂಘಟನೆಗಳ ನಾಯಕರನ್ನು ಬಂಧಿಸುವಂತೆಯೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.


Share Information
Advertisement
Click to comment

You must be logged in to post a comment Login

Leave a Reply