Connect with us

FILM

‘ದಂಡುಪಾಳ್ಯ-2’ನಲ್ಲಿ ಬೆತ್ತಲಾದ ಸಂಜನಾ: ಜಾಲತಾಣದಲ್ಲಿ ವೈರಲ್ ಆದ ವೀಡಿಯೋ

ಶ್ರೀನಿವಾಸ ರಾಜು ನಿರ್ದೇಶನದ ದಂಡುಪಾಳ್ಯ 2 ಚಿತ್ರದಲ್ಲಿ ಸೆನ್ಸಾರ್ ಕಟ್ ಆಗಿದೆ ಎನ್ನಲಾದ ಸಂಜನಾ ಹಾಟ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ನಲಿ  ಹರಿದಾಡುತ್ತಿವೆ. ಪೊಲೀಸ್ ಟಾರ್ಚರ್’ ಸೀನ್ ನಲ್ಲಿ ಸಂಜನಾ ಸಂಪೂರ್ಣ ಬೆತ್ತಲಾದ ದೃಶ್ಯಗಳು ಸೋಷಿಯಲ್ ಮಿಡೀಯಾದಲ್ಲಿ ಸಾಕಷ್ಟು ವೈರಲ್ ಆಗಿವೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಂಜನಾ ನಿರಾಕರಿಸಿದ್ದಾರೆ. ಚಿತ್ರದ ಪ್ರಮುಖ ದೃಶ್ಯಕ್ಕೆ ಸೆನ್ಸಾರ್ ಕತ್ತರಿ ಹಾಕಿದೆ. ಪೊಲೀಸ್ ಟಾರ್ಚರ್ ಭೀಕರವಾಗಿದ್ದ ಸನ್ನಿವೇಶಕ್ಕೆ ನಾನೊಬ್ಬ ಕಲಾವಿದೆಯಾಗೆ ನ್ಯಾಯ ಒದಗಿಸಿದ ಖುಷಿ ಇತ್ತು. ಇದು ತೆರೆಯಲ್ಲಿ ಬಂದಿದ್ದರೆ ಕಲಾವಿದೆಯಾಗಿ ನನ್ನ ಅಭಿನಯ ಪ್ರೇಕ್ಷಕರಿಗೆ ಗೊತ್ತಾಗುತ್ತಿತ್ತು. ಆದರೆ ಸೆನ್ಸಾರ್ ಆ ಸೀನ್​’ಗೆ ಕತ್ತರಿ ಹಾಕಿದ್ದು ತೀವ್ರ ನೋವಾಗಿದೆ ಎಂದು ಸಂಜನಾ ಇತ್ತೀಚಿಗೆ ಮಾದ್ಗೋಯಮಾಷ್ಟಿಯಲ್ಲಿ ಹೇಳಿದ್ದರು. ಈ ಅದೇ ದೃಶ್ಯ ವೈರಲ್ ಆಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಸಂಜನಾ ನಿಜವಾಗಿಯೂ ಈ ರೀತಿ ಕಾಣಿಸಿಕೊಂಡಿದ್ದು ನಿಜವೇ? ಎಂಬುದು ಕುತೂಹಲ ಮೂಡಿಸಿದ್ದು ಸಿನಿಮಾ ತೆರೆ ಕಂಡ ಬಳಿಕವೇ ಗೊತ್ತಾಗಲಿದೆ.