ತಾಯಿ, ಮಗು ನೇಣು ಬಿಗಿದು ಆತ್ಮಹತ್ಯೆ

ಸುಬ್ರಹ್ಮಣ್ಯ, ಮಾರ್ಚ್ 17: ತಾಯಿ ಹಾಗೂ ಮಗು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮೆಟ್ಟಿನಡ್ಕ ಎಂಬಲ್ಲಿ ನಡೆದಿದೆ.

ಮೆಟ್ಟಿನಡ್ಕದ ಸಾಲ್ತಡಿ ನಿವಾಸಿ ಯತೀಂದ್ರ ಎಂಬವರ ಪತ್ನಿ ಗೋಪಿ (30) ಹಾಗೂ ಮಗು ಅನ್ವಿತಾ (2) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ.

ಈ ದಂಪತಿಗಳ ಇನ್ನೋರ್ವ ಮಗಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದ ಕಾರಣ ಆಕೆ ಬದುಕುಳಿದಿದ್ದಾಳೆ.

ಸಾವಿಗೆ ಕಾರಣ ಏನು ಅನ್ನೋದು ಇನ್ನಷ್ಟೇ ತಿಳಿಯಬೇಕಿದ್ದು, ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments