ಪುತ್ತೂರು, ಅಗಸ್ಟ್ 8: ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ನೀಡದ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿರಿಸಿದೆ. ಜಿಲ್ಲೆಯಲ್ಲಿ ನೂರಾರು ದಲಿತ ಕುಟುಂಬಗಳು ಸೂರಿಲ್ಲದೆ ಬದುಕುತ್ತಿದ್ದರೂ, ಅಧಿಕಾರಿಗಳು ದಲಿತರಿಗೆ ಡಿಸಿ ಮನ್ನಾ ಭೂಮಿಯನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.