DAKSHINA KANNADA
ಡಿಕೆಶಿ ಮನೆ ಕಚೇರಿ ಮೇಲಿನ ಐಟಿ ದಾಳಿ ಸೇಡಿನ ರಾಜಕರಣ : ಸಚಿವ ಖಾದರ್

ಮಂಗಳೂರು,ಆಗಸ್ಟ್ 03 : ಸಚಿವ ಡಿಕೆ ಶಿವಕುಮಾರ್ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ನಡೆಸಿರುವುದು ಕೇಂದ್ರ ಸರ್ಕಾರದ ಸೇಡಿನ ರಾಜಕಾರಣ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಳಂಕರಹಿತ ಆಡಳಿತ ನೀಡಿದ್ದಾರೆ.ಇದಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಅಧೀನ ಸಂಸ್ಥೆಗಳನ್ನು ಬಳಸಿ ದಾಳಿ ನಡೆಸುತ್ತಿದೆ ಎಂದು ದೂರಿದರು .ಗುಜರಾತ್ ಶಾಸಕರು ರಕ್ಷಣೆಗಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ ಅದನ್ನೇ ನೆಪವಾಗಿ ಅಧಿಕಾರ ದುರುಪಯೋಗಪಡಿಸಿ ದಾಳಿ ಮಾಡಲಾಗಿದೆ ಎಂದು ಅವರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು .ಭ್ರಷ್ಟಾಚಾರ ವಿರುದ್ಧ ಕಾಳಜಿ ಇದ್ದರೆ ಲೋಕಪಾಲ್ ಮಸೂದೆ ಜಾರಿ ಮಾಡಲಿ .ಯುಪಿಎ ಸರ್ಕಾರವಿದ್ದಾಗ ಉಪವಾಸ ಕೂತವರು ಈಗ ಯಾಕೆ ಲೋಕಪಾಲ್ ಮಸೂದೆಯ ಬಗ್ಗೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.ಐಟಿ ದಾಳಿಯಿಂದಾಗಿ ಕಾಂಗ್ರೆಸ್ ಭಯ ಗೊಂಡಿಲ.ಸವಾಲನ್ನು ನಿಭಾಯಿಸಲು ಡಿಕೆಶಿ ಸಮರ್ಥರಾಗಿದ್ದಾರೆ ಎಂದು ಅವರು ಹೇಳಿದರು.ಸೇಡಿನ ರಾಜಕಾರಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದರು .
