Connect with us

    DAKSHINA KANNADA

    ಟರ್ಪಾಲ್ ಜೋಪಡಿಯಲ್ಲಿ ಹಿರಿಯಕ್ಷ ಜೀವ : ಸೂರಿಗಾಗಿ ಟೊಂಕ ಕಟ್ಟಿದೆ ಯಕ್ಷ ಧ್ರುವ

    ಮಂಗಳೂರು, ಆಗಸ್ಟ್ 20 :ವಿವಿಧ ಮೇಳಗಳಲ್ಲಿ ಸತತ ಎರಡು ದಶಕಗಳಿಂದ ಯಕ್ಷ ರಂಗದಲ್ಲಿ ಸೇವೆಸಲ್ಲಿಸಿದ್ದ ಯಕ್ಷಗಾನ ಕಲಾವಿದ ರಸ್ತೆ ಬದಿ ಟರ್ಪಾಲ್ ಪ್ಲಾಸ್ಟಿಕ್ ಡೇರೆ ಹಾಕಿ ಜೀವನ ಕಳೆಯುತ್ತಿದ್ದಾರೆ. ಕಟೀಲು, ಸುಂಕದಕಟ್ಟೆ ಮತ್ತು ಬೆಳ್ಮಣ್ ಹೀಗೆ ವಿವಿಧ ಮೆಳಗಳಲ್ಲಿ 24 ವರ್ಷ ತಿರುಗಾಟ ನಡೆಸಿದ 58 ವರ್ಷದ ಶ್ರೀ ಪುರಂದರ ಕಲಾಸೇವೆ ಮಾಡುವ ಸಂದರ್ಭದಲ್ಲಿಯೇ ಕಾಲು ನೋವಿನ ಸಮಸ್ಯೆಯಿಂದಾಗಿ ಗಜ್ಜೆಕಟ್ಟಲು ಸಾಧ್ಯವಾಗದೆ ಅಶಕ್ತತೆಯಿಂದ ಬೇರೆ ಯಾವುದೇ ಉದ್ಯೋಗ ಮಾಡಲಾಗದೆ ಇದೀಗ ಮಂಗಳೂರಿನ ಕುಂಜತ್ತಬೈಲಿನಲ್ಲಿ ಟರ್ಪಾಲ್ ಹೊದಿಸಿದ ಡೇರೆಯಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಅವರ ಅಕ್ಕ ಶಶಿಕಲ ಕೂಡ ಇದೇ ಡೇರೆಯಲ್ಲಿ ಪುರಂದರ ಅವರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮೊದಲು ಬಾಡಿಗೆ ಮನೆಯಲ್ಲಿದ್ದ ಇವರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಬೀದಿಗೆ ತಳ್ಳಲ್ಪಟ್ಟರು. ಇದೀಗ ಅಲ್ಲಿ ಇಲ್ಲಿ ಮನೆಗಳಲ್ಲಿ ಮುಸುರೆ ತಿಕ್ಕಿ ಅಣ್ಣನ ತುತ್ತಿಗೂ ಆಸರೆಯಾಗಿದ್ದಾಳೆ. ಈ ಜೋಪಡಿಯಲ್ಲಿ ಯಾವುದೆ ಮೂಲಭೂತ ಸೌಕರ್ಯಗಳಿಲ್ಲದೇ ಜೀವನ ಸಾಗಿಸುವುದು ನೋಡಿದಾಗ ಕಟುಕನಿಗೂ ಮನಸ್ಸು ಕರಗುವಂತಿದೆ.
    ಈ ವಿಷಯ – ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದ ಪಟ್ಲ ಸತೀಶ್ ಶೆಟ್ಟಿಯವರು, ಈ ಬಗ್ಗೆ ಫೌಂಡೇಶನ್ ಪದಾಧಿಕಾರಿಗಳಲ್ಲಿ ಚರ್ಚಿಸಿ ಟ್ರಸ್ಟ್ ವತಿಯಿಂದ ಮನೆ ನಿರ್ಮಿಸಿಕೊಡುವುದೆಂದು ನಿರ್ಧರಿಸಿ, ಪರಿಶೀಲನೆಗಾಗಿ ಕೋರ್ ಕಮಿಟಿ ಸದಸ್ಯರೊಂದಿಗೆ ಕುಂಜತ್ತಬೈಲಿನಲ್ಲಿರುವ ಡೇರೆ ಮನೆಗೆ ಭೇಟಿ ನೀಡಿದ್ದಾರೆ.ಪರಿಸ್ಥಿತಿ ಅವಲೋಕಿಸಿದಾಗ ನೆರವಿಗೆ ಸಂಕಷ್ಟಗಳು ಎದುರಾಗಿದೆ. ಅವರಿರುವ ಡೇರೆ ಮನೆಯು ಸರಕಾರಿ ಸ್ಥಳವಾಗಿರದೆ ಅದು ಖಾಸಗಿ ಒಡೆತನದ ಜಾಗವಾಗಿರುತ್ತದೆ. ಇದು ಅವರಿಗೆ ಶಾಶ್ವತ ಮನೆ ನಿರ್ಮಿಸಿ ಕೊಡಲು ತೊಡಕಾಗಿದೆ. ದಾನಿಗಳು ಮುಂದೆ ಬಂದು ಕನಿಷ್ಟ 5 ಸಂಟ್ಸ್ ಜಾಗ/ನಿವೇಶನವನ್ನು ಉಚಿತವಾಗಿ ನೀಡಿದಲ್ಲಿ ಫೌಂಡೇಶನ್ ವತಿಯಿಂದ ಉಚಿತವಾಗಿ ಮನೆ ನಿರ್ಮಾಣಮಾಡಿಕೊಡುವುದಾಗಿ ಪಟ್ಲ ಸತೀಶ್ ಶೆಟ್ಟಿಯವರು ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವ ಅಶಕ್ತ ಕಲಾವಿದನಿಗೆ ಸೂರು ಒದಗಿಸುವ ನಿಟ್ಟಿನಲ್ಲಿ, ಈ ನಿಟ್ಟಿನಲ್ಲಿ ಅವರು ಸಾರ್ವಜನಿಕರಲ್ಲಿ,ದಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಆದ್ದರಿಂದ ಸಹೃದಯಿ ಕಲಾಪೋಷಕರಲ್ಲಿ ವಿನಂತಿ. …
    ಮಂಗಳೂರು ತಾಲ್ಲೂಕು ಕುಂಜತ್ತಬೈಲ್ ಅಥವಾ ಅದರ ಪರಿಸರದ ಪ್ರದೇಶದಲ್ಲಿ (ಕಾವೂರು, ಬಜಪೆ) ಕನಿಷ್ಟ 5 ಸೆಂಟ್ಸ್ ಸ್ಥಳವನ್ನು ಉಚಿತವಾಗಿ ನೀಡಲು ದಾನಿಗಳು ಮುಂದೆ ಬಂದಲ್ಲಿ ಅವರ ಅಥವಾ ಅವರಿಗೆ ಸಂಬಂಧಪಟ್ಟವರ ಹೆಸರನ್ನು ಆ ಮನೆಗೆ ಇಡಲಾಗುವುದು.ಅಂತಹ ದಾನಿಯನ್ನು ಫೌಂಡೇಶನಿನ ಟ್ರಸ್ಟಿಯನ್ನಾಗಿ ಸ್ವೀಕರಿಸಲಾಗವುದು.ಅಂತಹ ದಾನಿಯನ್ನು ಯಕ್ಷಧ್ರುವ ಪಟ್ಲ ಸಂಭ್ರಮ ಕಾರ್ಯಕ್ರಮದಂದು ಸಾರ್ವಜನಿಕವಾಗಿ ಗೌರವಿಸಲಾಗುವುದು.ಆದ್ದರಿಂದ ವಿಶಾಲ ಹೃದಯದ ಸಜ್ಜನ ಬಾಂಧವರು ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೋರಿಕೆ.
    ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)
    ಕೇಂದ್ರೀಯ ಸಮಿತಿ ಮಂಗಳೂರು

    Share Information
    Advertisement
    Click to comment

    You must be logged in to post a comment Login

    Leave a Reply