DAKSHINA KANNADA
ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಮಂಗಳೂರಿನಲ್ಲಿ ಅನಾವರಣ
ಮಂಗಳೂರು ಅಗಸ್ಟ್ 13 : ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆಯನ್ನು ಮಂಗಳೂರಿನಲ್ಲಿ ಇಂದು ಅನಾವರಣಗೊಳಿಸಲಾಯಿತು ಮಂಗಳೂರಿನ ಬೆಂಗ್ರೆಯಲ್ಲಿ ಪ್ರತಿಮೆಯನ್ನು ಮಹಾರಾಷ್ಟ್ರದ ಗೃಹ ಸಚಿವ ದೀಪಕ್ ವಸಂತ್ ರಾವ್ ಕೆಸರ್ ಕರ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರನ್ನು ಹೇಗೆ ನಾವು ಮೊದಲಿಗೆ ನೆನಪಿಸುತ್ತೆವೆ ಹಾಗೆ ಕರ್ನಾಟಕದಲ್ಲಿ ಕಲ್ಲಡ್ಕ್ ಪ್ರಭಾಕರ್ ಭಟ್ ಅವರಿಗೆ ವಂದಿಸುತ್ತೇನೆ ಎಂದು ಹೇಳಿದರು,
ಮುಸ್ಲಿಂ ರಾಜನಾದ ಔರಂಗಜೇಬ್ ಹಾಗೂ ದಕ್ಷಿಣದ ಮುಸ್ಲಿಂ ರಾಜರನ್ನು ಕೆಳಗಿಳಿಸಲು ಶಿವಾಜಿ ಬರಬೇಕಾಯಿತು ಎಂದು ಹೇಳಿದ ಅವರು, ಹಿಂದೂ ಸಾರ್ಮಾಜ್ಯ ಪುನರ್ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರ ಪಾದಾರ್ಪಣೆ ದಕ್ಷಿಣದಲ್ಲಿ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸಮೇತ ಸಂಘ ಪರಿವಾರದ ಮುಖಂಡರು ಉಪಸ್ಥಿತರಿದ್ದರು. ಭಜರಂಗ ದಳ ಹಾಗೂ ವಿಎಚ್ ಪಿ ಬೆಂಗ್ರೆ ಘಟಕದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು