Connect with us

UDUPI

ಗ್ರಂಥಾಲಯ ದಿನಾಚರಣೆ

Share Information

ಉಡುಪಿ, ಆಗಸ್ಟ್ 16: ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇದರ ವತಿಯಿಂದ ಪುರಭವನದ ಮಿನಿಹಾಲ್‍ನಲ್ಲಿ ಸೋಮವಾರ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಆಭಿವೃದ್ದಿ ಸಮಿತಿಯ ಸದಸ್ಯರಾದ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷರು, ಪುತ್ರನ್ ಗ್ಯಾಸ್‍ನ ಮಾಲಕರಾದ ದಿನೇಶ್ ಪುತ್ರನ್ ಇವರು ದೀಪ ಬೆಳಗಿಸಿ ಗ್ರಂಥಾಲಯದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ರವರು ಕಾರ್ಯಕ್ರಮವನ್ನು ಉದ್ಫಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಬೇಸೆಂಟ್ ಸಂಧ್ಯಾ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಡಾ. ವಾಸಪ್ಪ ಗೌಡರವರು ಗ್ರಂಥಾಲಯದ ಪಿತಾಮಹರಾದ ಡಾ.ಎಸ್.ಆರ್. ರಂಗನಾಥನ್ ರವರ ಜೀವನ, ಅವರ ಶ್ಯೆಕ್ಷಣಿಕ ಸಾಧನೆಯ ಬಗ್ಗೆ ಹಾಗೂ ಅಂತರ್ಜಾಲದಲ್ಲಿ ಇ-ಬುಕ್ಸ್ ಇ-ಜರ್ನಲ್ಸ್‍ಗಳನ್ನು ಓದುವ ಕ್ರಮದ ಬಗ್ಗೆ, ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ಯಪ್, ಫೇಸ್ ಬುಕ್, ಟಿ.ವಿ. ಧಾರವಾಹಿ ಮುಂತಾದವುಗಳಿಂದ ದೂರವಿದ್ದು ಅನೇಕ ಗ್ರಂಥಗಳನ್ನು ಓದುವುದರಿಂದÀ ತುಂಬಾ ಸಾಧನೆಮಾಡಬಹುದು. ಹಾಗೆಯೆ ಅಬ್ದುಲ್ ಕಲಾಂ, ಜಾನ್ ರಸ್ಕಿನ್ ಮುಂತಾದ ಗಣ್ಯವ್ಯಕ್ತಿಗಳು ಜೀವನದಲ್ಲಿ ತುಂಬಾ ಕಷ್ಟಪಟ್ಟು ಅನೇಕ ಸಾಧನೆಮಾಡಿ ಪ್ರಸಿದ್ದಿಗಳಿಸಿದ್ದಾರೆ. ಹಾಗೂ ಅಂತರ್ಜಾಲ ಬಳಸುವ ಬಗ್ಗೆ, ಅದರ ಒಳಿತು, ಕೆಡುಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾಲೇಜಿನ ಪುಸ್ತಕ ಮಾತ್ರ ಓದದೇ ಅನೇಕ ಸಾಹಿತ್ಯ, ಸಂಸ್ಕøತಿಗಳ ಗ್ರಂಥಗಳನ್ನು ಓದುವುದರಿಂದ ಬೌದ್ಧಿಕ ಸಾಮಥ್ರ್ಯ ಹೆಚ್ಚಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಓದುವ ಕ್ರ್ರಮದ ಬಗ್ಗೆ ಅನೇಕ ಮಾಹಿತಿಗಳನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಗದೀಶ್ ರಾವ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯದ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ನಿಶ್ಮಿತಾ(ಪ್ರಥಮ), ವಿಶಾಲಾಕ್ಷಿ ಬಿ (ದ್ವಿತೀಯ) ಮತ್ತು ರಕ್ಷಿತಾ (ತೃತೀಯ), ಇವರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಸಂಯೋಜಕಿ, ಕಾಲೇಜಿನ ಮುಖ್ಯ ಗ್ರಂಥಪಾಲಕರಾದ ಯಶೋದಾ ಸ್ವಾಗತಿಸಿ, ಗ್ರಂಥಾಲಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.


Share Information
Advertisement
Click to comment

You must be logged in to post a comment Login

Leave a Reply