FILM
ಖ್ಯಾತ ನಟ ಪರೇಶ್ ರಾವಲರಿಂದ ಪ್ರಧಾನಿ ನರೇಂದ್ರ ಮೋದಿ ಸಿನೆಮಾ
ಖ್ಯಾತ ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಜೀವನವನ್ನಾಧರಿಸಿದ ಸಿನೆಮಾ ಮಾಡಲು ತಯಾರಿ ನಡೆಸಿದ್ದಾರೆ. ಅವರು ಈ ಸಿನೆಮಾದಲ್ಲಿ ಮೋದಿ ಪಾತ್ರವನ್ನು ಮಾಡಲಿದ್ದಾರೆ. Rediff ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಪರೇಶ್ ರಾವಲ್ ಈ ಸಿನೆಮಾಕ್ಕೆ ಸಿದ್ಧತೆ ಹೇಗೆ ನಡೆದಿದೆ ಎಂಬ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ…
ಇದರ ಆಯ್ದ ಭಾಗ ಇಲ್ಲಿದೆ..
ಪ್ರಶ್ನೆ ; ಮೋದಿಯವರ ಪಾತ್ರ ಮಾಡುವಲ್ಲಿ ನಿಮಗೆ ಯಾವ ಸವಾಲುಗಳು ಎದುರಾಗಬಹುದು?
ಇದು ಬಹಳ ಚಾಲೆಂಜಿಂಗ್ ಸಂಗತಿ. ಇಂಥ ಪಾತ್ರಗಳನ್ನು ಮಾಡುವಾಗ ನಾವು ಆ ವ್ಯಕ್ತಿಯ ನಕಲು ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಕೇವಲ ಮೋದಿ ಅವರ ಮಿಮಿಕ್ರಿ ಮಾಡಲೇಬೇಕೆಂದರೆ ಅದಕ್ಕೆ ನಾನ್ಯಾಕೆ ಬೇಕು? ಹಾಗೆ ಮಾಡುವವರು ಬಹಳ ಜನ ಸಿಗುತ್ತಾರೆ.
ಪ್ರಶ್ನೆ; ಈ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿದೆ?
ಈಗಂತೂ ಸಮಯ ಸಿಕ್ಕಾಗಲೆಲ್ಲ ನಾನು ಅವರನ್ನು(ನರೇಂದ್ರ ಮೋದಿ) ಭೇಟಿಯಾಗುತ್ತಿದ್ದೇನೆ. ಒಬ್ಬ ವ್ಯಕ್ತಿಯನ್ನು ಮೇಲ್ನೋಟಕ್ಕೆ ಗಮನಿಸುವುದರಿಂದ ತಯಾರಿ ಆಗುವುದಿಲ್ಲ. ಅದಕ್ಕೆ ಬಹಳಷ್ಟು ಗಮನ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ.
ಪ್ರಶ್ನೆ; ಈಗಿನ ರಾಜಕೀಯ ವಾತಾವರಣದಲ್ಲಿ ಇಂಥ ಪ್ರಯತ್ನ ಬೇಕಿತ್ತೇ?
ನೋಡಿ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಅವರ ಸುತ್ತಲಿನ ವಾತಾವರಣ ಚಂಚಲವಾಗಿಯೇ ಇದೆ. ನೀವು ಯಾವ ರಾಜಕೀಯ ವಾತಾವರಣದ ಬಗ್ಗೆ ಮಾತನಾಡುತ್ತಿದ್ದೀರಲ್ಲ. ಅದನ್ನು ಅವರ ವಿರೋಧಿಗಳು ಸೃಷ್ಟಿಸುತ್ತಿದ್ದಾರಷ್ಟೆ. ಉದಾಹರಣೆಗೆ, ಡಿಮಾನಿಟೈಸೇಷನ್ ಸಮಯದಲ್ಲಿ ಇವರೆಲ್ಲ ಭಯ ಸೃಷ್ಟಿಸಿದರು. ಆದರೆ ಆದದ್ದೇನು? ಜನರು ಸಾಲು ಸಾಲು ಕ್ಯೂಗಳಲ್ಲಿ ನಿಂತರೂ ದೊಂಬಿಗಳಾಗಲಿಲ್ಲ. ಸಹನೆ ಕಳೆದುಕೊಂಡದ್ದು ಸಾಮಾನ್ಯ ಜನರಲ್ಲ, ಬದಲಾಗಿ ಮೋದಿ ವಿರೋಧಿಗಳು. ಡಿಮಾನಿಟೈಸೇಷನ್‌ನಿಂದ ತಮ್ಮ ಕಪ್ಪು ಹಣವೆಲ್ಲ ರದ್ದಿ ಹಾಳೆಯಾಗಿದ್ದನ್ನು ನೋಡಿ ಅವರ ಅಸಹನೆ ಹೆಚ್ಚಿತು. ಈ ಕಾರಣಕ್ಕಾಗಿಯೇ ರಾಜಕೀಯ ವಾತಾವರಣವನ್ನು ಹದಗೆಡೆಸಿ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರು. ಆದರೆ ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎನ್ನುವುದು ಗೊತ್ತಿದೆ. ಅದಕ್ಕೇ ಅವರು ವಿರೋಧಿಗಳಿಗೆ ಸೊಪ್ಪುಹಾಕಲಿಲ್ಲ.
ಸಿನೆಮಾದಲ್ಲಿ ನಾನು, ಹೇಗೆ ಮೋದಿ ತಮಗೆದುರಾದ ಪರಿಸ್ಥಿತಿಯನ್ನು ನಿಭಾಯಿಸಿದರು, ಆ ಘಟನೆಗಳ ಹಿಂದಿನ ಕಾರಣಗಳೇನು? ಎನ್ನುವುದನ್ನು ಎದುರಿಡಲು ಪ್ರಯತ್ನಿಸುತ್ತಿದ್ದೇನೆ.
You must be logged in to post a comment Login