Connect with us

DAKSHINA KANNADA

ಖಾಸಾಗೀಕರಣ ವಿಲೀನಕ್ಕೆ ವಿರೋಧ, ಬೀದಿಗೀಳಿದ ಬ್ಯಾಂಕ್ ನೌಕರರು

ಮಂಗಳೂರು, ಆಗಸ್ಟ್ 22 : ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ ಮತ್ತು ವಿಲೀನದ ಕೇಂದ್ರ ಸರಕಾರದ ಧೋರಣೆ ಖಂಡಿಸಿ ಇಂದು ದೇಶವ್ಯಾಪಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಒಂದು ದಿನದ ಮುಷ್ಕರ ನಡೆಸಿದರು. ಮಂಗಳೂರಿನಲ್ಲೂ ಬ್ಯಾಂಕ್ ಮುಷ್ಕರ ಬಿಸಿ ತಟ್ಟಿತ್ತು.ಸಾರ್ವಜನಿಕ ರಂಗದ ಬ್ಯಾಂಕುಗಳ ನೌಕಕರು ತಮ್ಮ ಕೆಲಸಗಳನ್ನು ಬಹಿಷ್ಕರಿಸಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಯುಎಫ್ ಟಿಯು ಕರೆ ಕೊಟ್ಟಿರುವ ಮುಷ್ಕರಕ್ಕೆ ಎಲ್ಲಾ ಜಿಲ್ಲೆಯಲ್ಲಿರುವ ಬಹುತೇಕ ಬ್ಯಾಂಕ್ ಸಂಘಟನೆಗಳು ಬೆಂಬಲ ನೀಡಿದ್ದುವು. ಇದರಿಂದ ಬ್ಯಾಂಕ್ ವಹಿವಾಟುಗಳು ಸ್ಥಗಿತಗೊಂಡಿದ್ದರಿಂದ ಬ್ಯಾಂಕಿಗ್ ಕೆಲಸಕ್ಕೆ ಗ್ರಾಹಕರು ಪರದಾಟ ನಡೆಸಬೇಕಾಯಿತು. ಸರಕಾರಿ ಸಾಮ್ಯದ ಬ್ಯಾಂಕುಗಳ ಖಾಸಗೀಕರಣ ಮಾಡಲಾಗುತ್ತಿದೆ ಇದರಿಂದ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿಗೆ ಅಭದ್ರತೆ ಕಾಡುತ್ತಿದೆ ಹಾಗೆ ಈ ಬ್ಯಾಂಕುಗಳಿಗೆ ಸಾಕಷ್ಟು ಬಂಡವಾಳ ಪೂರೈಸಲು ಸರಕಾರ ನಿರಾಕರಿಸುತ್ತಿದೆ ಹೊಸದಾಗಿ ಕಾರ್ಪೊರೇಟ್ ಬ್ಯಾಂಕ್, ಸಣ್ಣ ಬ್ಯಾಂಕ್, ಠೇವಣಿ ಬ್ಯಾಂಕುಗಳನ್ನು ಸ್ಥಾಪಿಸಲು ಪರವಾನಿಗೆ ನೀಡುವ ಮೂಲಕ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ದುರ್ಬಲ ಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಆರೋಪಿಸಿದೆ.ಗ್ರಾಹಕರ ಮೇಲೆ ಬ್ಯಾಂಕ್ ಸೇವಾ ಶುಲ್ಕ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಅದು ದೂರಿದೆ. ಸುಸ್ತಿ ಸಾಲ ವಸೂಲಾತಿಗೆ ಸಂಸತ್ ನ ಸಮಿತಿ ಹೊರಡಿಸಿರುವ ಶಿಫಾರಸು ಕೂಡಲೇ ಜಾರಿಗೊಳಿಸಬೇಕು ಇತ್ತೀಚೆಗೆ ಸರಕಾರ ಹೊರಡಿಸಿರುವ ಫೈನಾನ್ಶಿಯಲ್ ರೆಸಲ್ಯೂಷನ್ ಅಂಡ್ ಡೆಪಾಸಿಟ್ ಇನ್ಸೂರೆನ್ಸ್ ಮಸೂದೆ ಹಿಂಪಡೆಯಬೇಕು, ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕೆಂದು ಅದು ಒತ್ತಾಯಿಸಿದೆ.ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮತ್ತೆ ಕರೆ ನೀಡಲಾಗುತ್ತದೆ ಎಂದು ಅದು ಎಚ್ಚರಿಸಿದೆ. ಈ ಮಧ್ಯೆ ಎಸ್ ಬಿ ಐ ವಯುಕ್ತಿಕ ಸಾಲದ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ರದ್ದು ಮಾಡಿದೆ.

Share Information
Advertisement
Click to comment

You must be logged in to post a comment Login

Leave a Reply