Connect with us

  UDUPI

  ಕೋಟ್ಪಾಕಾಯಿದೆ :6,100 ದಂಡ ವಸೂಲಿ

  ಕೋಟ್ಪಾ ಕಾಯಿದೆ :6,100 ದಂಡ ವಸೂಲಿ
  ಉಡುಪಿ, ಸೆಪ್ಟೆಂಬರ್ 28: ಉಡುಪಿ ಜಿಲ್ಲೆಯಲ್ಲಿ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮತ್ತು ಹಿರ್ಗಾನ ಪ್ರದೇಶಗಳಲ್ಲಿ ವಿವಿಧ ತಂಬಾಕು ಮಾರಾಟದ ಅಂಗಡಿಗಳು ಹೋಟೇಲ್‍ಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ದಾಳಿ ನಡೆಸಿದೆ.
  ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 44 ಪ್ರಕರಣ ದಾಖಲಿಸಿ ರೂ. 6100/- ದಂಡ ವಸೂಲಿ ಮಾಡಲಾಗಿದೆ. ಅದರಂತೆ ಸೆಕ್ಷನ್ 4, 6 (ಎ) ಮತ್ತು 6(ಬಿ) ನಾಮಫಲಕಗಳನ್ನು ಸದರಿ ದಾಳಿಯಲ್ಲಿ ವಿತರಿಸಲಾಯಿತು.
  ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ವಾಸುದೇವ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀಕೆ.ಕೃಷ್ಣಪ್ಪ, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಕೆ.ಎಸ್.ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ಬಿ.ವಿ ಶಿವರಾಮ್ ರಾವ್, ಕಾರ್ಮಿಕ ಇಲಾಖೆಯ ಪ್ರಸನ್ನ ಕುಮಾರ್, ಜಿಲ್ಲಾ ಎನ್.ಟಿ.ಸಿ.ಪಿ ಘಟಕದ ಸಮಾಜ ಕಾರ್ಯಕರ್ತೆ ಶೈಲಾ ಎಸ್ ಎಮ್, ಕಾರ್ಕಳ ಪೋಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ದಿನಕರ್ ಹಾಗೂ ವಾಹನ ಚಾಲಕರಾದ ಪ್ರಸಾದ್ ಮತ್ತು ಸತೀಶ್ ಉಪಸ್ಥಿತರಿದ್ದರು.
  Share Information
  Advertisement
  Click to comment

  You must be logged in to post a comment Login

  Leave a Reply