Connect with us

LATEST NEWS

ಕೃಷಿ ತೋಟಗಳಿಗೆ ಕಂಬಳಿಹುಳ ಕಾಟ, ಕೃಷಿಕ ಹೈರಾಣ.

13687419_677857405715464_959988691_nಸುಳ್ಯ, ಜುಲೈ 16: ಮಳೆಗಾಲದಲ್ಲಿ ಕರಾವಳಿಯ ಕೃಷಿಕರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗೋದು ಸಾಮಾನ್ಯ. ಕಳೆದ ಹಲವು ವರ್ಷಗಳಿಂದ ಆಫ್ರಿಕನ್ ಬಸವನ ಹುಳುವಿನ ತೊಂದರೆ ಅನುಭವಿಸಿಕೊಂಡು ಬಂದಿದ್ದ ಕೃಷಿಕರಿಗ ಈ ಬಾರಿ ಕಂಬಳಿ ಹುಳಗ ಕಾಟ ಹೆಚ್ಚಾಗತೊಡಗಿದೆ. ಕೃಷಿ ತೋಟ ತುಂಬಾ ಕಂಬಳಿ ಹುಳಗಳು ಹರಿದಾಡುತ್ತಿದ್ದು, ಅಡಿಕೆ ಮರ, ತೆಂಗು ಮರ ,ಬಾಳೆ ಗಿಡ ಹೀಗೆ ಎಲ್ಲೆಲ್ಲೂ ಕಂಬಳಿ ಹುಳಗಳು ತುಂಬಿ ಕೃಷಿಕರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಮಳೆಗಾಲ ಆರಂಭಗೊಂಡು ತಿಂಗಳೊಳಗೆ ಅಡಿಕೆ ಗಿಡಗಳಲ್ಲಿ ಹಿಂಗಾರ ಬೆಳೆಯಲು ಆರಂಭವಾಗುವ ಸಂದರ್ಭದಲ್ಲಿ ಅದಕ್ಕೆ ಬೋರ್ಡೋ ದ್ರಾವಣವನ್ನು ಬಿಡುವುದು ಅವಶ್ಯಕವಾಗಿರುತ್ತದೆ. ಆದರೆ ಇದೀಗ ಅಡಿಕೆ ಮರಗಳ ತುಂಬಾ ಈ ಕಂಬಳಿ ಹುಳಗಳು ತುಂಬಿಕೊಂಡಿದ್ದರಿಂದ ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವವರು ಮರ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಅಡಿಕೆಗೆ ಮದ್ದು ಬಿಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅಡಿಕೆಗೆ ಕೊಳೆರೋಗ ಕಾಡುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದಾಗಿ ಕೃಷಿಕರು ಇದೀಗ ಆತಂಕದಲ್ಲಿದ್ದಾರೆ.

Facebook Comments

comments