DAKSHINA KANNADA
ಕುರಾನನ್ನು ಅಪವಿತ್ರಗೊಳಿಸಿದ ಪೊಲೀಸ್ ಸಿಬ್ಬಂದಿ ವಜಾಕ್ಕೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಗ್ರಹ

ಮಂಗಳೂರು,ಸೆಪ್ಟೆಂಬರ್ 04 :ಕುರಾನನ್ನು ಅಪವಿತ್ರಗೊಳಿಸಿದ ಪೊಲೀಸ್ ಸಿಬ್ಬಂದಿ ವಜಾ ಮಾಡಬೇಕೆಂದು ಮುಸ್ಲೀಂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಪೊಲೀಸರು ತನಿಖೆಯ ನೆಪದಲ್ಲಿ ಪವಿತ್ರ ಗ್ರಂಥ ಕುರಾನ್ ಗೆ ಅವಮಾನ ಮಾಡಿರುವುದನ್ನು ಮುಸ್ಲಿಂ ಸಮುದಾಯ ಸಹಿಸುವುದಿಲ್ಲ, ಅದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶ್ರಫ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸರು ತನಿಖೆ ನೆಪವೊಡ್ಡಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಪವಿತ್ರ ಕುರಾನ್ ಗ್ರಂಥವನ್ನು ನೆಲಕ್ಕೆ ಎಸೆದು ದಾಂಧಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು. ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿ ಖಲಂದರ್ ಅವರ ಕುಟುಂಬಸ್ತರ ಮೇಲೂ ತನಿಖೆಯ ನೆಪದಲ್ಲಿ ಹಲ್ಲೆ ಡೆಸಿದ್ದಾರೆ ಎಂದು ದೂರಿದ್ದಾರೆ. ಬಂಟ್ವಾಳ ಪೋಲಿಸರ ಈ ವರ್ತನೆ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ
ತನಿಖೆ ನೆಪದಲ್ಲಿ ಪವಿತ್ರ ಗ್ರಂಥ ಕುರಾನ್ ಗೆ ಅವಮಾನ ಮಾಡಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ನಡೆಸಲಾದ ಚಿತ್ರೀಕರಣದ ವಿಡಿಯೋ ಪೊಲೀಸ್ ಅಧಿಕಾರಿಗಳಲ್ಲಿ ಇದೆ ಅದನ್ನು ವೀಕ್ಷಿಸಿದ ಬಳಿಕ ಹೋರಾಟದ ರೂಪುರೇಷೆ ಹಾಕಲಾಗುವುದು ಎಂದರು. ಈ ಹಿನ್ನೆಯಲ್ಲಿ ಕುರಾನ್ ಗೆ ಅವಮಾನ ಮಾಡಿದ ಪೊಲೀಸ್ ಸಿಬ್ಬಂದಿ ಯನ್ನು ಈ ಕೂಡಲೇ ವಜಾಗೊಳಿಸಿ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.