ಮಂಗಳೂರು ಅಗಸ್ಟ್ 04 : ಅಳ್ವಾಸ್ ನ ವಿದ್ಯಾರ್ಥಿ ಕಟೀಲು ದೇವರಗುಡ್ಡೆ ನಿವಾಸಿ ಕಾವ್ಯ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಮುಲ್ಕಿ ಬಿಲ್ಲವ ಸಂಘದ ವತಿಯಿಂದ ಬಿಲ್ಲವ ಸಂಘದ ಮುಂಭಾಗ ಪ್ರತಿಭಟನೆ ನಡೆಯಿತು, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಕಾವ್ಯ ನಿಗೂಡ ಸಾವಿನ ಹಿಂದೆ ಅನೇಕ ಸಂಶಯವಿದೆ, ಆ ಸಂಶಯದ ಸುಳಿಯ ಬಗ್ಗೆ ಪ್ರತಿಭಟನೆ ನಡೆಯುತ್ತಿದ್ದೇವೆ.

ಕಾವ್ಯ ತಂದೆ ತಾಯಿ ಮಗಳನ್ನು ಕಳೆದುಕೊಂಡ ದುಖ: ದಲ್ಲಿದ್ದಾರೆ, ಸಾವಿಗೀಡಾಗುವ ಮುನ್ನಾ ದಿನ  ನಗುತ್ತಾ ಮಾತನಾಡಿದ ಕಾವ್ಯ ಅತ್ಮಹತ್ಯೆ ಮಾಡಿಕೊಳ್ಳಲು ಸಾದ್ಯವಿಲ್ಲ ಎಂಬುದು ಹೆತ್ತವರ ಅಳಲು, ಅತ್ಮಹತ್ಯೆ ಹಿಂದೆ ಯಾರದೇ ಕೈವಾಡವಿರಲಿ ಅವರಿಗೆ ಶಿಕ್ಷೆ ಆಗಬೇಕು ಎಂದರು ಈ ಸಂದರ್ಭ ಕಾವ್ಯ ಸಾವು ನ್ಯಾಯಯುತ ತನಿಖೆಗೆ ಒತ್ತಾಯಿಸಿ ಮುಲ್ಕಿ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಹಳೆಯಂಗಡಿ ಬಿಲ್ಲವ ಸಂಘದ ಗೌರಾವಾಧ್ಯಕ್ಷ ಗಣೇಶ್ ಬಂಗೇರ, ಚೇಳಾರು ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಮೀನ್ ಮಟ್ಟು, ಬಿಲ್ಲವ ಸಂಘದ ಅಧ್ಯಕ್ಷ ಉದಯ ಅಮೀನ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ದಿನ್ ರಾಜ್ ಬಂಗೇರ, ಉಮೇಶ್ ಮಾನಂಪಾಡಿ ಮತ್ತಿತರರು ಇದ್ದರು.