ಪುತ್ತೂರು, ಅಗಸ್ಟ್ 23 : ಪುತ್ತೂರು ಸಮೀಪದ ಮುಕ್ವೆ ಎಂಬಲ್ಲಿ ಹಿಂದೂ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾಗ ವಿದ್ಯಾರ್ಥಿನಿಯ ಕಡೆಯವರು ಎಚ್ಚೆತ್ತ ಕಾರಣ ಆರೋಪಿ ಪೋಲಿಸರ ವಶವಾಗಿದ್ದಾನೆ. ಗಾಂಜ ವ್ಯಸನಿಯಾದ ಅರೋಪಿ ಝಕಾರಿಯ ಮತಾಂದ ಸಂಘಟನೆಯೊಂದರ ಸದಸ್ಯ ಎನ್ನಲಾಗುತ್ತಿದೆ. ಸಂಜೆ ಕಾಲೇಜು ಮುಗಿಸಿ ಮನೆಗೆಹೋಗುತ್ತಿದ್ದಾಗ ಝಕರಿಯ ವಿದ್ಯಾರ್ಥಿನಿಯನ್ನು ಪೋಲೋ ಮಾಡಿ ಮೊಬೈಲ್ ನಂಬರ್ ಎಸೆದು ಕೈಹಿಡಿದು ಎಳೆದ ಮತ್ತೊಮ್ಮೆ ವಿದ್ಯಾರ್ಥಿನಿ ಮೈಮೇಲೆ ಕೈಹಾಕಲು ಬಂದಾಗ ಹುಡುಗಿ ತಪ್ಪಿಸಿಕೊಂಡು ತನ್ನ ಮನೆಯಲ್ಲಿ ತಿಳಿಸಿದ ಕಾರಣ ವಿದ್ಯಾರ್ಥಿನಿಯ ಸಹೋದರರು ಮತ್ತು ಹಿಂದೂ ಸಂಘಟನೆಯ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಠಾಣೆಗೆ ತೆರಳಿ ಕೇಸು ದಾಖಲಿಸಿದ್ದಾರೆ. ಪೋಲಿಸರು ಆರೋಪಿಯ ಶೋಧ ಕಾರ್ಯಕ್ಕೆ ಇಳಿದ ಮಾಹಿತಿ ತಿಳಿದು ತಪ್ಪಿಸಿಕೊಳ್ಳಲು ಪ್ರಯತ್ನ ಪಡುವ ಸಂದರ್ಭ ಪೋಲಿಸರ ಕೈಗೆ ಸಿಕ್ಕಿ ಬಿದ್ಧಿದ್ದಾನೆ. ಈ ಹಿಂದೆ ಎರಡು ಕಳ್ಳತನ ಕೇಸು ಈತನ ಮೇಲೆ ಇದೆ ಎಂದು ಫೊಲಿಸರು ತಿಳಿಸಿದ್ದಾರೆ.

1 Shares

Facebook Comments

comments