Connect with us

LATEST NEWS

ಕಾಂಗ್ರೇಸ್ಸಿಗರು ಆಧುನಿಕ ಭಸ್ಮಾಸರು – ಕೇಂದ್ರ ಸಚಿವ ಅನಂತ ಕುಮಾರ್

ಕಾಂಗ್ರೇಸ್ಸಿಗರು ಆಧುನಿಕ ಭಸ್ಮಾಸರು – ಕೇಂದ್ರ ಸಚಿವ ಅನಂತ ಕುಮಾರ್

ಉಡುಪಿ ಅಕ್ಟೋಬರ್ 16: ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಸಮಾವೇಶ ಇಂದು ಉಡುಪಿಯ ಬ್ರಹ್ಮಾವರದಲ್ಲಿ ನಡೆಯಿತು. ಪರಿವರ್ತನಾ ಸಮಾವೇಶವನ್ನು ಕೇಂದ್ರ ಸಚಿವ ಅನಂತ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು , ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದ ಮುಖ್ಯಮಂತ್ರಿ ಎಂದು ಆರೋಪಿಸಿದರು, ಅಹಂಕಾರ , ಅವ್ಯವಹಾರ, ಅಸಡ್ಡೆಯೇ ಸಿಎಂ ಸಿದ್ದರಾಮಯ್ಯ ಅವರ ಸಾಧನೆಯಾಗಿದ್ದು . ಕಾಂಗ್ರೇಸ್ಸಿ ಗರು ಆಧುನಿಕ ಭಸ್ಮಾಸುರರು ಎಂದು ಕಿಡಿಕಾರಿದರು.

ಕಾಂಗ್ರೇಸ್ ನ್ನು ರಾವಣ ಸೇನೆಗೆ ಹೋಲಿಸಿದ ಅನಂತ ಕುಮಾರ್ ರಾವಣನ ವಧೆ ನಂತರ ಹೊಸ ಆಡಳಿತ ಬರುವ ಮುಂಚೆ ವಿಭಿಷಣ ರಾವಣ ಸೇನೆ ಬಿಟ್ಟು ರಾಮನ ಸೇನೆ ಸೇರಿದ್ದನು,. ಅದೇ ರೀತಿ ಜಯಪ್ರಕಾಶ್ ಹೆಗ್ಡೆ ಅವರು ರಾವಣನ ಸೇನೆಯನ್ನು ಬಿಟ್ಟು ರಾಮನ ಸೇನೆ ಸೇರಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಸಮರ್ಥಿಸಿಕೊಂಡರು.

ರಾಜ್ಯಕ್ಕೆ ಬೆಂಕಿ ಹಚ್ಚಲು ಬಂದಿದ್ದಾರೆ ಸಿದ್ದರಾಮಯ್ಯ – ಆರ್ ಅಶೋಕ್

ಸಮಾವೇಶದಲ್ಲಿ ರಾಜ್ಯ ಸರಕಾರದ ವಿರುದ್ಧ ಮಾಜಿ ಡಿಸಿಎಂ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ರಾಜ್ಯದ ಯಾವೊಬ್ಬ ಮಂತ್ರಿಗಳೂ ಕೆಲಸ ಮಾಡುತ್ತಿಲ್ಲ, ಈ ಎಲ್ಲ ಮಂತ್ರಿಗಳಿಗೂ ಹೆಡ್ ಮಾಸ್ಟರ್ ನಿದ್ದರಾಮಯ್ಯ, ಅದ್ಕಾಗಿ ನಾವು ಪದೇ ಪದೇ ಹೇಳ್ತೀದ್ದೀವಿ ಎದ್ದೇಳು ನಿದ್ದರಾಮಯ್ಯ, ಎದ್ದೇಳು ನಿದ್ದರಾಮಯ್ಯ ಎಂದು ಲೇವಡಿ ಮಾಡಿದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯನವ್ರು ಕೆಲಸ ಮಾಡೋಕೆ ಬಂದಿಲ್ಲ ರಾಜ್ಯದಲ್ಲಿ ಬೆಂಕಿ ಹಚ್ಚಲು ಬಂದಿದ್ದಾರೆ ಎಂದು ಆರೋಪಿಸಿದರು.