Connect with us

    DAKSHINA KANNADA

    ಕಲ್ಲಡ್ಕದ ಶಾಲೆಗಳು ಮತೀಯ ಮನಸ್ಸುಗಳನ್ನು ಸೃಷ್ಠಿಸುವ ಕಾರ್ಖಾನೆ – ರಮಾನಾಥ ರೈ ಆರೋಪ

    ಮಂಗಳೂರು ಅಗಸ್ಟ್ 14 : ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಪುಣಚ ಶಾಲೆಯ ಮಕ್ಕಳಿಗಾಗಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಭೀಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇಲ್ಲ, ಶಾಲೆಗಳಿಗಾಗಿ ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ನಟರಿಂದ ಜನಾರ್ಧನ ರೆಡ್ಡಿ ಯಂತಹ ಬಂಡವಾಳ ಶಾಹಿಗಳಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಊಟದ ವಿಚಾರದಲ್ಲಿ ಮಕ್ಕಳ ಕೈಯಲ್ಲಿ ತಟ್ಟೆ ನೀಡಿ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದರು. ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದ ಧಾರ್ಮಿಕ ಪರಿಷತ್ ಕಾನೂನಿನ ಪ್ರಕಾರವಾಗಿ ಕಲ್ಲಡ್ಕದ  ಶಾಲೆಗಳಿಗೆ ನೆರವನ್ನು ಸ್ಥಗಿತಗೊಳಿಸಿದೆ ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿದರು.

    ಕಲ್ಲಡ್ಕದ ಶಾಲೆಗಳಲ್ಲಿ ಮಕ್ಕಳಿಗೆ ಮತೀಯ ವಾದವನ್ನು ಬೋಧಿಸಲಾಗುತ್ತಿದೆ ಈ ಶಾಲೆಗಳು ಮತೀಯ ಮನಸ್ಸುಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಗಂಭೀರ ಆರೋಪ ಮಾಡಿದ್ದಾರೆ.
    ಬಡವರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮುಖ್ಯಮಂತ್ರಿ ಯವರು ಮಾಡಿಲ್ಲ .ಈ ಕೆಲಸವನ್ನು ಕೇವಲ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ್ದಾರೆ. ಬಡವರ ನೋವು ಏನೆಂದು ಮುಖ್ಯಮಂತ್ರಿಯವರಿಗೆ ಗೊತ್ತು . ಕಲ್ಲಡ್ಕ ಪ್ರಭಾಕರ ಭಟ್ರಿಗೆ ಬಡವರ ನೋವು ಏನೆಂದು ಗೊತ್ತಿಲ್ಲ. ಮಕ್ಕಳ ಅನ್ನಕ್ಕೆ ಕನ್ನ ಹಾಕಿರುವುದು ರಮಾನಾಥ್ ರೈ ಅಲ್ಲ . ಮಕ್ಕಳ ಅನ್ನವನ್ನು ಕಸಿದಿರುವುದು ಕಲ್ಲಡ್ಕ ಪ್ರಭಾಕರ ಭಟ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ದೇವಾಲಯದಿಂದ ಬರುತ್ತಿರುವುದು ಅನುದಾನ ವಲ್ಲ ಅದು ಕೇವಲ ನೆರವು ಮಾತ್ರ ಎಂದು ಹೇಳಿದವರು ಉಭಯ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಲವಾರು ಶಾಲೆಗಳಿವೆ ಅವುಗಳಿಗೆ ನೆರವು ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.
    ಕೊಲ್ಲೂರು ದೇವಾಲಯದಿಂದ ಈವರೆಗೆ ನಗದು ರೂಪದಲ್ಲಿ ನೆರವು ಪಡೆಯಲಾಗಿದೆ. ಹಣದ ರೂಪದಲ್ಲಿ ನೆರವು ಪಡೆದರೆ ದುರುಪಯೋಗ ಸುಲಭ ಈ ಹಿನ್ನಲೆಯಲ್ಲಿ ದೇವಾಲಯದಿಂದ ಈವರೆಗೆ ಬಂದ ಹಣ ದುರುಪಯೋಗವಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು. ಕಲ್ಲಡ್ಕ ಪ್ರಭಾಕರ ಭಟ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಧಾರ್ಮಿಕ ವಿಚಾರ ಎರಡನೆಯದ್ದು ಎಂದು ಅವರು ಆರೋಪಿಸಿದರು .

    ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಮೀಪದಲ್ಲಿ ಸರಕಾರಿ ಶಾಲೆಯಿದೆ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿ ಸೇರಿಸಲಿ. ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಯೋಜನೆಯಂತೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ,ಶೂ ,ಹಾಲು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ತಮ್ಮ ಶಾಲೆಯ ಮಕ್ಕಳಿಗೆ ಊಟ ನೀಡುವ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ ನಾನೇ ಸರ್ಕಾರದಲ್ಲಿ ಮಾತನಾಡಿ ಊಟ ಕೊಡಿಸುತ್ತೇನೆ ಎಂದು ಎಂದು ಹೇಳಿದರು. ಶಾಲೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಣ ಸಂಗ್ರಹದ ಆಂದೋಲನ ನಡೆಸಲಾಗುತ್ತಿದೆ. ಇದೊಂದು ಹಣ ಮಾಡುವ ದಂಧೆ ಈ ಮೋಸಕ್ಕೆ ಯಾರು ಬಲಿಯಾಗಬಾರದು ಎಂದು ಅವರು ಕರೆನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply