ಮಂಗಳೂರು,ಆಗಸ್ಟ್ 21 : ಕರ್ತವ್ಯದಲ್ಲಿರುವಾಗಲೇ ಪೋಲಿಸ್ ಅಧಿಕಾರಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರು ಪೋಲಿಸ್ ಕಮಿಶನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೋಲಿಸ್ ಠಾಣೆಯಲ್ಲಿ ಸಂಭವಿಸಿದೆ.ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಉಪ ನಿರೀಕ್ಷಕರಾದ ಕೃಷ್ಣ (56 ವರ್ಷ) ಅವರೇ ಈ ದುರ್ದೈವಿಯಾಗಿದ್ದಾರೆ.ಅಧಿಕ ರಕ್ತದೊತ್ತಡ ಹಾಗೂ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ಇತ್ತಿಚಿನ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಕುಸಿದು ಬಿದ್ದ ಕೃಷ್ಣ ಅವರನ್ನು ಕೂಡಲೇ ಸ್ಥಳೀಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರುಯೆಳೆದಿದ್ದಾರೆ.  ASI ಕೃಷ್ಣ ಅವರ ಅಕಾಲಿಕ ಮರಣಕ್ಕೆ ಪೋಲಿಸ್ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಕೃಷ್ಣ ಅವರು ಈ ಹಿಂದೆ ಪಾಂಡೇಶ್ವರ, ಪಣಂಬೂರು ಹಾಗೂ ಸಂಚಾರಿ ಪೋಲಿಸ್ ಠಾಣೆಗಳಲ್ಲಿ  ಸೇವೆ ಸಲ್ಲಿಸಿದ್ದು, ಅವರ ಸಹೋದರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

0 Shares

Facebook Comments

comments