Connect with us

UDUPI

ಕರಾವಳಿ ಅಭಿವೃದ್ಧಿ ಪ್ರಾಧಿಕಾರ:ಪ್ರಗತಿ ಪರಿಶೀಲನಾ ಸಭೆ

ಉಡುಪಿ,ಆಗಸ್ಟ್ 24: ಕರಾವಳಿ ಅಭಿವೃದ್ಧಿ  ಪ್ರಾಧಿಕಾರದ ವತಿಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯು ಕರಾವಳಿ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಮಂಗಳೂರು ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಾನುಷ್ಠಾನಾಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಕೆ. ದಿವಾಕರ ಶೆಟ್ಟಿ, ಬಿ.ರಾಜಶೇಖರ ಶೆಟ್ಟಿ, ಜೆ. ನಾಗೇಂದ್ರಕುಮಾರ್, ಸಾಹುಲ್ ಹಮೀದ, ರಾಜಶೇಖರ್ ನಾಯಕ್, ಕೆ. ಬಾಲಕೃಷ್ಣ ಆಳ್ವ ಮಾಣಿ, ಕೆ.ಎ ಸತೀಶ್ಚಂದ್ರ, ತಿಮ್ಮಪ್ಪ ಗೋಯ್ಡ ಗೌಡ, ಯಶವಂತ ಶೆಟ್ಟಿ, ಅಮೃತ್ ಕದ್ರಿ, ಸಾಹುಲ್ ಅಮೀದ್, ಯೂಸಫ್ ಭಾವ, ಸೀತರಾಮ ಪೂಜಾರಿ, ಪಿಯೂಸ್ ಮೊಂತೇರೊ, ಕೆ. ಇಬ್ರಾಹಿಂ, ಕಾರ್ಯದರ್ಶಿಗಳಾದ ಪ್ರದೀಪ್ ಡಿ’ಸೋಜಾ, ಮೂರು ಜಿಲ್ಲೆಯ ಇಲಾಖಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Facebook Comments

comments