Connect with us

LATEST NEWS

ಕರಾವಳಿಯಲ್ಲಿ ಮತ್ತೆ ಮೊಳಗಿದ ನಕ್ಸಲ್ ಪರ ಘೋಷಣೆ..

ಉಡುಪಿ, ಅಗಸ್ಟ್ 21 : ಕರಾವಳಿಯಲ್ಲಿ ಮತ್ತೊಮ್ಮೆ ನಕ್ಸಲ್ ಪರ ಘೋಷಣೆಗಳು ಮೊಳಗಿವೆ. ಅದು ಕೂಡ ಕೋರ್ಟ್ ಆವರಣದಲ್ಲಿ. ಉಡುಪಿಯ ಜಿಲ್ಲಾ ಆವರಣದಲ್ಲಿ ಈ ಘೋಷಣೆಗಳು ಮೊಳಗಿವೆ. 2008 ರಲ್ಲಿ ಹೆಬ್ರಿ ಭೊಜರಾಜ ಶೆಟ್ಟಿ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದ ಆರೋಪಿ ನಕ್ಸಲ್ ವೀರಮಣಿ ಅವರನ್ನು ನ್ಯಾಯಾಲಯಕ್ಕೆ ಕರೆ ತಂದಾಗ ನ್ಯಾಯಾಲಯದ ಆವರಣದಲ್ಲಿ ಅವರು ಮಾವೋವಾದಕ್ಕೆ ಜಯವಾಗಲಿ ನಕ್ಸಲೀಯರು ದೇಶ ಭಕ್ತರು, ದಮನ ನೀತಿಗೆ ನಾವು ಹೆದರೋದಿಲ್ಲ. ಮಲೆನಾಡಿನಿಂದ ಜನರ ಎತ್ತಂಗಡಿ ಕಾರ್ಯ ನಡೆಯೋದಿಲ್ಲ. ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸೊಣ. ನಕ್ಸಲ್ ಶರಣಾಗತಿ ಎಂದಿಗೂ ಇಲ್ಲವೇ ಇಲ್ಲ. ಅಮರ ವೀರರ ಆಶಯಗಳನ್ನು ಈಡೇರಿಸೋಣ. ಮಾವೋಯಿಸಂ ಜಿಂದಾಬಾದ್. ಕ್ರಾಂತಿಯನ್ನು ಎನ್ ಕೌಂಟರಿಂದ ತಡೆಯಲು ಸಾಧ್ಯವಿಲ್ಲ. ಬಂಧಿಸಿದರೆ ಹೋರಾಟ ನಿಲ್ಲುವುದಿಲ್ಲ. ಸಮಾಜದಲ್ಲಿ ಬದಲಾವಣೆ ಬಂದೇ ಬರುತ್ತದೆ, ಮಾವೋವಾದಕ್ಕೆ ಜಯವಾಗಲಿ ಎಂದು ನಕ್ಸಲ್ ವೀರಮಣಿ ಘೋಷಣೆ ಕೂಗಿದರು. 2008ರಲ್ಲಿ ಹೆಬ್ರಿ ಸಮೀಪದ ನಾಡ್ಪಾಲು ಗ್ರಾಮದಲ್ಲಿ ನಕ್ಸಲರಿಂದ ಹತ್ಯೆಗೀಡಾದ ಶಿಕ್ಷಕ ಭೋಜ ಶೆಟ್ಟಿ ಮತ್ತು ಕೃಷಿಕ ಸುರೇಶ್‌ ಶೆಟ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಆರೋಪದಲ್ಲಿ ತಮಿಳುನಾಡಿನಲ್ಲಿ ಬಂಧನಕ್ಕೊಳಗಾಗಿದ್ದ ಈತ ಈ ಹಿಂದೆಯೂ ಕುಂದಾಪುರ ನ್ಯಾಯಾಲಯಕ್ಕೆ ಹಾಗೂ ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನಕ್ಸಲ್ ಪರ ಘೋಷಣೆಗಳನ್ನು ಕೂಗಿದ್ದ.