MANGALORE
ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಮಂಗಳೂರು ಮೇಯರ್ ಗೆ ಚಿನ್ನ
ಕರಾಟೆ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಮಂಗಳೂರು ಮೇಯರ್ ಗೆ ಚಿನ್ನ
ಮಂಗಳೂರು ನವೆಂಬರ್ 6: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನೀಲ್ ಒಂಬತ್ತು ವರ್ಷಗಳ ಬಳಿಕ ಕರಾಟೆ ಕಣಕ್ಕೆ ಧುಮುಕಿ ಇಂಡಿಯನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದರು.
ಫೈನಲ್ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ವಿರುದ್ಧ 7-3 ಅಂಕಗಳಿಂದ ಸೋಲಿಸಿ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ತಾನೂ ಅರ್ಹತೆ ಪಡೆಯುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದರು. ಪೈನಲ್ ಹೋರಾಟದ ಆರಂಭದಲ್ಲಿ ನಿಶಾ ತೀವ್ರ ಪೈಪೋಟಿ ನೀಡಿ 3-3 ಅಂಕ ಮಗೊಳಿಸಿದರೂ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯ ಅವರನ್ನು 8-0 ಅಂಕಗಳಿಂದ ಬಗ್ಗುಬಡಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.
65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಕವಿತಾ ಸನಿಲ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರು.
1996ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಇವರು, ಒಂಬತ್ತು ವರ್ಷದ ಬಳಿಕ ಕಣಕ್ಕೆ ಧುಮುಕಿದ್ದರು. ಹುಟ್ಟೂರಿನಲ್ಲಿ ನಡೆಯುವ ಈ ಚಾಂಪಿಯನ್ಶಿಪ್ಗಾಗಿ ನಗರದ ಮೇಯರ್ ಆಗಿ ಕಾರ್ಯಭಾರಗಳ ಒತ್ತಡದ ನಡುವೆಯೂ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು.
Facebook Comments
You may like
ಮಂಗಳೂರು ಮಹಾನಗರಪಾಲಿಕೆ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ
ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಫ್ ಗೆ ಆಯ್ಕೆಯಾದ ಪವನ್ ಕುಮಾರ್ ಗೆ ನೆರವು
ಪಲಿಮಾರು ಶ್ರೀಗಳ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ಮೇಯರ್ ಗೈರು
ಮದುವೆಗೆ ಸಹಾಯ ಬೇಡಿ ಬಂದ ಮದುಮಗಳಿಗೆ ನೆರವು ನೀಡಿದ ಮೇಯರ್
ಮಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್
ಹಲ್ಲೆ ಆರೋಪ ಬಿಜೆಪಿಯ ಪಿತೂರಿ – ಮೇಯರ್ ಕವಿತಾ ಸನಿಲ್
You must be logged in to post a comment Login