ಮಂಗಳೂರು, ಆಗಸ್ಟ್ 21 : ಮಂಗಳೂರಿನ ಮೇರಿಹಿಲ್ ಸಮೀಪದ ಪಶ್ಚಿಮ ವಲಯದ ಐ.ಜಿ.ಪಿ.ಯವರ ಅಧಿಕೃತ ಸರಕಾರಿ ಬಂಗ್ಲೆ ಪ್ರದೇಶದಿಂದ ಬೃಹತ್ ಶ್ರೀ ಗಂಧದ ಮರ ಕಳುವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿ ಸುಮಾರು 10 ರಿಂದ 15 ಪೋಲೀಸ್ ಸಿಬ್ಬಂದಿಯನ್ನೊಳಗೊಂಡ ಭದ್ರತೆಯ ಮಧ್ಯೆ ಎರಡು ಗಂಟೆ ಅವಧಿಯಲ್ಲಿ ಬೃಹತ್ ಶ್ರೀ ಗಂಧದ ಮರ ಕುರುವು ಇಲ್ಲದಂತೆ ಮಾಯಾವಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ನಾಲ್ಕು ಜಿಲ್ಲೆಗಳನ್ನು ಹದ್ದು ಬಸ್ತಿನಲ್ಲಿಡುವ ಒರ್ವ ಉನ್ನತ ಅಧಿಕಾರಿಗೆಯೇ ಈ ಜಿಲ್ಲೆಯಲ್ಲಿ ಭದ್ರತೆ ಎಂಬುದು ಕನಸಾದರೆ ಸಾಮಾನ್ಯ ಜನರ ಪಾಡೇನು ಎಂಬುವುದು ದ.ಕ.ಜಿಲ್ಲೆಯ ಪ್ರಜ್ನಾವಂತರ ಮಾತು.

Facebook Comments

comments