Connect with us

UDUPI

ಎನ್.ಎಸ್.ಎಸ್ ಗೆ 13.60 ಕೋಟಿ ಅನುದಾನ- ಪ್ರಮೋದ್

ಎನ್.ಎಸ್.ಎಸ್ ಗೆ 13.60 ಕೋಟಿ ಅನುದಾನ- ಪ್ರಮೋದ್

ಉಡುಪಿ, ಸೆಪ್ಟೆಂಬರ್ 16: ರಾಜ್ಯದಲ್ಲಿ ಎನ್.ಎಸ್.ಎಸ್ ನ್ನು ಬಲಪಡಿಸುವ ಉದ್ದೇಶದಿಂದ 13.60 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶನಿವಾರ ಎಂಜಿಎಂ ಕಾಲೇಜು ಉಡುಪಿಯ ರಾಷ್ಟೀಯ ಸೇವ ಯೋಜನಾ ಘಟಕ 1 ಮತು 2 ಆಶ್ರಯದಲ್ಲಿ ಎಂಜಿಎಂ ನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಎನ್.ಎಸ್.ಎಸ್ ದತ್ತು ಗ್ರಾಮ ಯೋಜನೆ ಅನ್ವಯ ಅಲೆವೂರು ಗ್ರಾಮ ದತ್ತು ಸ್ವೀಕರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಇತರೆ ರಾಜ್ಯಗಳ ಎನ್.ಎಸ್.ಎಸ್ ಗೆ ಕೇಂದ್ರದ ಅನುದಾನ ದೊರೆಯುತ್ತಿದೆ ಆದರೆ ರಾಜ್ಯದಲ್ಲಿ ಕೇಂದ್ರದ ನೆರವು ಪಡೆಯದೇ ರಾಜ್ಯ ಸರ್ಕಾರವೇ ಅನುದಾನ ಬಿಡುಗಡೆ ಮಾಡುತ್ತಿದ್ದು, ಕಳೆದ ವರ್ಷ 5 ಕೋಟಿ 65 ಲಕ್ಷ ಇದ್ದ ಅನುದಾನವನ್ನು ಈ ವರ್ಷ 13.60 ಕೋಟಿಗೆ ಹೆಚ್ಚಿಸಲಾಗಿದೆ, ಎನ್.ಎಸ್.ಎಸ್ ಸದಸ್ಯರ ಸಂಖ್ಯೆಯನ್ನು 3 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಎನ್.ಎಸ್.ಎಸ್ ಬಲವರ್ಧನೆಗೆ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಂದು ಸಚಿವರು ಹೇಳಿದರು.

Share Information
Advertisement
Click to comment

You must be logged in to post a comment Login

Leave a Reply