WhatsApp Image 2017-07-11 at 2.15.36 PM WhatsApp Image 2017-07-11 at 2.15.37 PMಮಂಗಳೂರು ಜುಲೈ 11 – ವಾಹನ ರಿವರ್ಸ್ ತೆಗೆಯುವ ವಿಚಾರದಲ್ಲಿ ವಾಗ್ವದ ನಡೆದು  ಓರ್ವನಿಗೆ ಚೂರಿ ಇರಿದ ಘಟನೆ  ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಸ್ಥಳೀಯ ಟೆಂಪೋ ಚಾಲಕ ಅಸ್ಟಿನ್ (27) ಚೂರಿ ಇರಿತಕ್ಕೊಳಗಾಗಿದ್ದು, ಆಸ್ಟಿನ್ ನ್ನು ಸ್ಥಳೀಯರು ಉಳ್ಳಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಆಸ್ಟಿನ್ ನ್ನು ಇರಿದ ಆರೋಪಿಗಳು ಕಾರಿನಲ್ಲಿ  ಮಾರಕಾಸ್ತ್ರಗಳನ್ನು ಒಯ್ಯುತ್ತಿರುವ ಬಗ್ಗೆ ಹಲವಾರು ಸಂಶಯಗಳು ಎದ್ದಿವೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುವ ಅಗತ್ಯ ಇದೆ.

Facebook Comments

comments