Connect with us

DAKSHINA KANNADA

ಉರುಳಿದ ಭಾರಿ ಮರ : ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿ ಬಂದ್

ಪುತ್ತೂರು,ಜುಲೈ.22 : ಇಲ್ಲಿನ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಮರಕ್ಕಿಣಿ ಎಂಬಲ್ಲಿ ಭಾರಿ ಗಾತ್ರದ ಮರಬಿದ್ದು ವಾಹನ ಸಂಚಾರ ಸ್ಥಗಿತ‌ಗೊಂಡಿದೆ.

ವಿಟ್ಲದಿಂದ ಕಾಸರಗೋಡು ಸಂಪರ್ಕಿಸುವ ರಸ್ತೆಯ ಮರಕ್ಕಿನಿ ಎಂಬಲ್ಲಿರುವ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಜಾಗದಲ್ಲಿದ್ದ ಬೃಹತ್ ಮಾವಿನ ಮರ ರಸ್ತೆ ಉರುಳಿದೆ. ಇದರಿಂದ ವಿಟ್ಲ, ಅಡ್ಯನಡ್ಕ, ಪೆರ್ಲ, ಕಾಸರಗೋಡು ಕಡೆಗಳಿಗೆ ಸಂಚಾರ ಮಾಡುವ ವಾಹನಗಳು ಸಂಚರಿಸಲಾಗದೇ ರಸ್ತೆಯಲ್ಲಿ ಸಾಲು ಗಟ್ಟಿ ನಿಂತಿದೆ.

 ಇದರಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೇಪು ಗ್ರಾಮ ಪಂಚಾಯತ್ ಸದಸ್ಯ ಕರೀಂ ಕುದ್ದುಪದವು, ಅರಣ್ಯ ಇಲಾಖೆಯ ಸಿಬ್ಬಂದಿ ಪದ್ಮನಾಭ ಮೊದಲಾದ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಸಹಕಾರದಲ್ಲಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Facebook Comments

comments