ಉಡುಪಿ,ಜುಲೈ.19: ಕಾಡು ಹಂದಿಗೆ ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಮೂಡು ಬೆಳ್ಳೆಯ ಕಲ್ಮಜೆಯಲ್ಲಿ ನಡೆದಿದೆ. ಚಿರತೆಯನ್ನು ಕಂಡು ಆತಂಕಗೊಂಡ ಸ್ಥಳೀಯರು ನಂತರ ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯಧಿಕಾರಿಗಳ ತಂಡ ಸ್ಥಳೀಯ ತಜ್ಙ ವೈದ್ಯರ ಸಹಕಾರೊಂದಿಗೆ ಅರವಳಿಕೆಯ ಚುಚ್ಚು ಮದ್ದನ್ನು ನೀಡಿ ಉರುಳಿನಿಂದ ಬಿಡಿಸಿ ಯಶಸ್ವಿಯಾಗಿ ಬೋನಿಗೆ ವರ್ಗಯಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ದೊಡ್ಡ ಗಾತ್ರದ ಚಿರತೆ ಇದಾಗಿದ್ದು 2 ದಿನಗಳ ಹಿಂದೆಯೇ ಉರುಳಿಗೆ ಬಿದ್ದಿರುವ ಸಾಧ್ಯತೆಗಳಿವೆ ಎಂದು ಅರಣ್ಯಧಿಕಾರಿಗಳು ಹೇಳಿದ್ದು, ಗಾಯಗಳಾಗಿರುವ ಪರಿಣಾಮ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.

Facebook Comments

comments