ಮಂಗಳೂರು ಅಗಸ್ಟ್ 14 : ನಾಯಕ ನಟ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದು ಸಿನಿಮಾ ಮಾಡಿದಂತೆ ಅಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ನಾರಾಯಣ ಗೌಡ ಅಭಿಪ್ರಾಯ ಪಟ್ಟಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಹಾಗೆಂದು ಉಪೇಂದ್ರ ಒಬ್ಬರೇ ಹೊಸ ಪಕ್ಷ ಕಟ್ಟುತ್ತೇನೆ ಅದು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು .
ರಾಜಕೀಯ ಪಕ್ಷ ಕಟ್ಟುವುದು ಸಿನಿಮಾ ಮಾಡಿದಂತೆ ಅಲ್ಲ ಎಲ್ಲರ ಜೊತೆ ಸಮಾಲೋಚನೆ ನಡೆಸಿ ಮುಂದಡಿ ಇಟ್ಟರೆ ಉತ್ತಮ ಎಂದು ಅವರು ಕಿವಿಮಾತು ಹೇಳಿದರು. ರಾಜಕೀಯ ಪಕ್ಷ  ಕಟ್ಟುವುದು ಬಿಡುವುದಕ್ಕಷ್ಟೇ ಸೀಮಿತವಾಗಿರಬಾರದು ಎಂದು ಹೇಳಿದ ಅವರು ಉಪೇಂದ್ರ ಅವರ ಪಕ್ಷವನ್ನು ಬೆಂಬಲಿಸುವ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು .
ಮಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು .

Facebook Comments

comments