Connect with us

LATEST NEWS

ಶಾಸಕರ ಮುಂದೆಯೇ ರಾಷ್ಟ್ರಧ್ವಜದ ಅವಮಾನ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ..

ಉಡುಪಿ, ಅಗಸ್ಟ್ 16 : ಸ್ಥಳೀಯ ಶಾಸಕನ ಮುಂದೆಯೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದಿದೆ.ಉದ್ಯಾವರ ಫ್ರೆಂಡ್ಸ್ ಸರ್ಕಲ್ ಎನ್ನುವ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ನಡೆದ ವೈದ್ಯಕೀಯ ಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭವನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯ ಮುಂದೆ ಇದ್ದ ಟಿಪಾಯಿಯ ಕೆಳಗಡೆ ರಾಷ್ಟ್ರಧ್ವಜವನ್ನು ಅಂಟಿಸಲಾಗಿತ್ತು. ಇದೇ ಸಮಾರಂಭದಲ್ಲಿ ಕಾಪು ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪಾಲ್ಗೊಂಡಿದ್ದು, ರಾಷ್ಟ್ರಧ್ವಜಕ್ಕೆ ಆಗುತ್ತಿರುವ ಈ ಅವಮಾನವನ್ನು ಕಂಡೂ ಸುಮ್ಮನಾಗಿದ್ದಾರೆ ಕುರಿತು ವ್ಯಾಪಕ ಟೀಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಶಾಸಕರು ಫಲಾನುಭವಿಯೊಬ್ಬರಿಗೆ ಚೆಕ್ ವಿತರಿಸುತ್ತಿರುವ ಚಿತ್ರದಲ್ಲಿ ಫಲಾನುಭವಿಯ ಕಾಲ ಬುಡದಲ್ಲಿ ರಾಷ್ಟ್ರಧ್ವಜವಿದೆ. ರಾಷ್ಟ್ರಧ್ವಜಕ್ಕೆ ಸನ್ಮಾನ ಕೊಡುವ ಗುರುತರ ಜವಾಬ್ದಾರಿಯಿರುವ ಆಡಳಿತ ಪಕ್ಷದ ಶಾಸಕ ಉಡುಪಿಯ ಮಾಜಿ ಉಸ್ತುವಾರಿ ಸಚಿವರೂ ಆಗಿರುವ ವಿನಯ್ ಕುಮಾರ್ ಸೊರಕೆ ತಾನು ಕುಳಿತ ವೇದಿಕೆಯಲ್ಲಿ ತನ್ನ ಕಾಲ ಬುಡದಲ್ಲೇ ರಾಷ್ಟ್ರಧ್ವಜವಿದ್ದರೂ, ಅದನ್ನು ಗಮನಿಸದೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾರ್ಯಕ್ರಮದಲ್ಲಿ ಭಾಗಿಯಾಗಿಯಾದ ಮಾಜಿ ಸಚಿವರ ಮೇಲೂ ಕ್ರಮ ಜರುಗಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ. ವೇದಿಕೆ ಸಿಕ್ಕಿತೆಂದರೆ ಪೂರ್ವಾಪರ ನೋಡದೆ ಸಿಕ್ಕ ಸಿಕ್ಕ ವೇದಿಕೆ ಏರುವ ಜನಪ್ರತಿನಿಧಿಗಳಿಗೆ ಇದೊಂದು ಪಾಠವೂ ಆಗಬೇಕಿದೆ.

Share Information
Advertisement
Click to comment

You must be logged in to post a comment Login

Leave a Reply