Connect with us

    UDUPI

    ಉಡುಪಿಯಲ್ಲಿ ನವ ಭಾರತ ಪ್ರತಿಜ್ಞಾ ವಿಧಿ

    ಉಡುಪಿ, ಆಗಸ್ಟ್19 : ನೆಹರು ಯುವ ಕೇಂದ್ರ ಉಡುಪಿ ಹಾಗೂ ಉಡುಪಿ ಜಿಲ್ಲಾಡಳಿತದ ಸಹಕಾರದಿಂದ ನವ ಭಾರತ ಪ್ರತಿಜ್ಞೆಯನ್ನು ಇದೇ ಅಗಸ್ಟ್ 9 ರ ಮಧ್ಯಾನ ದಂದು ದೊಡ್ಡಸಂಖ್ಯೆಯಲ್ಲಿ ಸೇರಿದ್ದ ಉಡುಪಿಯ ಆಹ್ವಾನಿತ ನಾಗರಿಕರ ಸಮ್ಮುಖದಲ್ಲಿ ನಮ್ಮ ಸ್ವಾತಂತ್ರ ಹೋರಾಟಗಾರರು ಕ್ವಿಟ್ ಇಂಡಿಯಾ(ಭಾರತ ಬಿಟ್ಟು ತೊಲಗಿರಿ) ಚಳುವಳಿಯ ಸ್ಮರಣಾರ್ಥ ಅಂದು ಅವರು ತೆಗೆದುಕೊಂಡ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತಾ ಭಾರತ ಸರಕಾರದ ನಿರ್ದೇಶನದಂತೆ ನವ ಭಾರತ ಪ್ರತಿಜ್ಞೆಯನ್ನು ಭೊದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ರಾಷ್ಟ್ರಹಿತದ ಕಾರ್ಯಕ್ರಮಕ್ಕೆ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿಗಳಾದ ವಿಲ್ಲ್‍ಫ್ರೆಡ್ ಡಿ’ಸೋಜ ಮುಂದಾಳತ್ವದಲ್ಲಿ ನಡೆಸಿಕೊಂಡು ಬರಲಾಯಿತು. ಪ್ರತಿಜ್ಞಾ ಭೋಧನೆಯ ಮೋದಲು ಶ್ರೀಯುತ ಡಿ’ಸೋಜರವರು ಈ ನವ ಭಾರತ ಪ್ರತಿಜ್ಞೆಯ ಬಗ್ಗೆ ವಿವರಿಸಿ ಹೇಳುತ್ತಾ ತಿಳಿಸಿದ್ದೇನೆಂದರೆ ಅಗಸ್ಟ್ ಕ್ರಾಂತಿ ಆಂದೋಲನ 1942 ಅಗಸ್ಟ್ 9 ನೇ ತಾರೀಖಿನಂದು ಆರಂಭವಾಗಿ ಮುಂದಿನ ಐದು ವರ್ಷದಲ್ಲಿ ಅಂದರೆ ಭಾರತ ಸ್ವಾತಂತ್ರ ಗಳಿಸುವ ತನಕ ಅಂದರೆ 1947 ರ ಅಗಷ್ಟ್ 15 ತನಕ ರಾಷ್ಟ್ರದ ಅಂದಿನ ನಾಯಕರು ವiಹಾತ್ಮ ಗಾಂದೀಯವರ ನೇತೃತ್ವದಲ್ಲಿ ಹಲವಾರು ಆಂದೋಲನ,ಚಳುವಳಿಗಳನ್ನು ರೂಪಿಸಿಕೊಂಡು ಬರಲು ಅನುವಾಯಿತು ಹಾಗೂ ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಅತಿ ಹೆಚ್ಚಿನ ಪಾತ್ರವಹಿಸಿತು. ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರ ಇಚ್ಛೆಯಂತೆ ಬರುವ ಐದು ವರ್ಷದಲ್ಲಿ 2022 ರ ತನಕ ಅಂದರೆ ಸ್ವಾತಂತ್ರೋತ್ಸವದ ವಜ್ರಮಹೋತ್ಸವದ ವೇಳೆಗೆ ಸಂಕಲ್ಪಪರ್ವವನ್ನು ಅದರಂತೆ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಹೊಂದಿದ ನವ ಭಾರತದೆಡೆಗೆ ಸಾಗಲು “ಸಂಕಲ್ಪದಿಂದ ಸಿದ್ಧಿ” ಎಂಬ ಮಂತ್ರವನ್ನು ಹೇಳಿಕೊಟ್ಟಿದ್ದಾರೆ. ಅದರಂತೆ ಕೇಂದ್ರಸರ್ಕಾರದ ಆದೇಶದಂತೆ ಈ ಪ್ರತಿಜ್ಞಾವಿಧಿಯನ್ನು ನಡೆಸಿಕೊಂಡು ಬರಲಾಯಿತು.

    ಈ ನಿಟ್ಟಿನಲ್ಲಿ ಮಹೇಶ್ ರವರು ನವ ಭಾರತ ಪ್ರತಿಜ್ಞಾ ಭೋಧನೆಯನ್ನು ನೆರೆದಿದ್ದ ಸರ್ವರಿಗೂ ಭೋಧಿಸಿದರು
    ಪ್ರತಿಜ್ಞೆಯ ಸಾರಂಶ ಈ ಕೆಳಕಂಡಂತೆ ಇತ್ತು.
    ” ಸಂಕಲ್ಪದಿಂದ ಸಿದ್ಧಿ ನವ ಭಾರತ ಅಂದೋಲನ 2017-2022 ನವ ಭಾರತ ಪ್ರತಿಜ್ಞೆ
    ನವ ಭಾರತಕ್ಕಾಗಿ ನಾವೆಲ್ಲ ಒಗ್ಗೂಡಿ ಪ್ರತಿಜ್ಞೆ ಮಾಡುವ 1942 ರಲ್ಲಿ ನಮ್ಮ ಸ್ವಾತಂತ್ರ ಹೋರಾಟಗಾರರು ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿಯ ಪ್ರತಿಜ್ಞೆಯನ್ನು ತೆಗೆದುಕೊಂಡರು ಮತ್ತು 1947 ರಲ್ಲಿ ನಮ್ಮ ದೇಶ ಸ್ವಾತಂತ್ರವನ್ನು ಪಡೆಯಿತು.
     ನಾವೆಲ್ಲಾ ಒಗ್ಗೂಡಿ 2022 ರ ಒಳಗೆ ನವ ಭಾರತ ಕಟ್ಟುವ ಪ್ರತಿಜ್ಞೆ ಮಾಡೋಣ
     ನಾವೆಲ್ಲಾ ಒಗ್ಗೂಡಿ ಸ್ವಚ್ಛ ಭಾರತದ ಪ್ರತಿಜ್ಞೆ ಮಾಡೋಣ
     ನಾವೆಲ್ಲಾ ಒಗ್ಗೂಡಿ ಬಡತನ ಮುಕ್ತ ಭಾರತದ ಸಂಕಲ್ಪ ಮಾಡೋಣ
     ನಾವೆಲ್ಲಾ ಒಂದು ಸೇರಿ ಭ್ರಷ್ಟಚಾರ ಮುಕ್ತ ಭಾರತದ ಪ್ರತಿಜ್ಞೆ ಮಾಡೋಣ
     ನಾವೆಲ್ಲಾ ಒಂದು ಸೇರಿ ಆತಂಕವಾದ ಮುಕ್ತ ಭಾರತದ ಪ್ರತಿಜ್ಞೆ ಮಾಡೋಣ
     ನಾವೆಲ್ಲಾ ಒಂದು ಸೇರಿ ಕೋಮುವಾದ ಮುಕ್ತ ಭಾರತದ ಪ್ರತಿಜ್ಞೆ ಮಾಡೋಣ
     ನಾವೆಲ್ಲಾ ಒಂದು ಸೇರಿ ಜಾತಿವಾದ ಮುಕ್ತ ಭಾರತದ ಪ್ರತಿಜ್ಞೆ ಮಾಡೋಣ
    ಈ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗೂಡಿ ನಮ್ಮ ಮನಸ್ಸು ಮತ್ತು ಕಾರ್ಯದಲ್ಲಿ ನವಭಾರತ ನಿರ್ಮಾಣಮಾಡುವ ಪ್ರತಿಜ್ಞೆ ತೆಗೆದುಕೊಳ್ಳೊಣ.”

    ನೆರೆದಿದ್ದ ಸರ್ವರೂ ಏಕಮನಸ್ಕರಾಗಿ ಶ್ರದ್ಧೆ ಹಾಗೂ ಭಕ್ತಿಯಿಂದ ಈ ಪ್ರತಿಜ್ಞಾ ವಿಧಿಯಲ್ಲಿ ಭಾಗವಹಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply