ಉಡುಪಿ.ಜುಲೈ.20 : ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಗೆ ಉಡುಪಿ ಜಿಲ್ಲೆಯಲ್ಲಿ ಅನೇಕ ಅನಾಹುತಗಳು ಸಂಭವಿಸಿವೆ. ಆನೇಕ ಮನೆಗಳಿಗೆ ಹಾನಿಯಾಗಿದೆ, ಹತ್ತಾರು ಮರಗಳು ಧರಗೆ ಉರುಳಿವೆ.

ಪಡುಬಿದ್ರೆ ಎರ್ಮಾಳು ಪ್ರದೇಶದಲ್ಲಿ ಮಳೆ ಗಾಳಿಗೆ ಬಾರೀ ಹಾನಿ ಸಂಭವಿಸಿದೆ. ನಾರಾಯಣ ಪೂಜಾರಿ ಮನೆಗೆ ಮರಬಿದ್ದು ಸುಮಾರು 75 ಸಾವಿರ ರೂ ನಷ್ಟ ಸಂಭವಿಸಿದರೆ,ಪೂಂದಾಡು ಲೀಲಾ ಶೆಟ್ಟಿ ಮನೆಯ ಭಾಗಶಃ ಹಾರಿದ ಹೆಂಚುಗಳು ಗಾಳಿ ಮಳೆಗೆ ಹಾರಿಹೋಗಿ ನಷ್ಟ ಸಮಭವಿಸಿದೆ.

ವಿಠಲ ಮೇಸ್ತ್ರಿ ಮನೆಯ ಮಹಡಿಗೂ ಮರಬಿದ್ದು ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗ ಅರುಣ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದು ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ದಾರೆ.