Connect with us

  DAKSHINA KANNADA

  ಆಳ್ವಾಸ್ ವಿದ್ಯಾರ್ಥಿ ಕಾವ್ಯಾ ಆತ್ಮಹತ್ಯೆ ಪ್ರಕರಣ ಆಳ್ವಾಸ್ ಗೆ ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಭೇಟಿ.

  ಮಂಗಳೂರು – ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮೂಡಬಿದ್ರೆ ಆಳ್ವಾಸ್ ಹೈಸ್ಕೂಲಿನ ವಿಧ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ. ಇಂದು ರಾಜ್ಯ ಸರಕಾರದ ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಆಳ್ವಾಲ್ ಹೈಸ್ಕೂಲ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಗ್ರಪ್ಪ ಅವರು ಹಾಸ್ಟೆಲ್ ನ ಸಿಬ್ಬಂದಿಯ ವಿಚಾರಣೆ ನಡೆಸಿದರು. ಕಾವ್ಯಾಳ ನಿಗೂಢ ಸಾವಿನ ಹಿನ್ನಲೆಯಲ್ಲಿ ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿರುವ ಉಗ್ರಪ್ಪ ಅವರ ಆಳ್ವಾಸ್ ಭೇಟಿ ಬಹಳ ಮಹತ್ವ ಪಡೆದಿದೆ. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್, ಜಿಲ್ಲಾಧಿಕಾರಿ ಜಗದೀಶ್ ಈ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಅವರು ಕಾವ್ಯಾ ಸಹಪಾಠಿಗಳು , ದೈಹಿಕ ಶಿಕ್ಷಕರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ನಂತರ ಕಟೀಲಿನ ಕಾವ್ಯಾ ಅವರ ಮನೆಗೆ ಭೇಟಿ ನೀಡಿದರು.

  Share Information
  Advertisement
  Click to comment

  You must be logged in to post a comment Login

  Leave a Reply