Connect with us

DAKSHINA KANNADA

ವಿಘ್ನ ಸಂತೋಷಿಗಳು ಆಳ್ವ ಚಾರಿತ್ರ್ಯವಧೆ ನಡೆಸುವುದು ಅಕ್ಷಮ್ಯ ಅಪರಾಧ : ಡಾ.ಪ್ರಭಾಕರ್ ಜೋಶಿ

ಮಂಗಳೂರು, ಆಗಸ್ಟ್ 10 :ವಿಘ್ನ ಸಂತೋಷಿಗಳು ಆಳ್ವ ಚಾರಿತ್ರ್ಯವಧೆ ನಡೆಸುವುದು ಅಕ್ಷಮ್ಯ ಅಪರಾದ.ಡಾ. ಮೋಹನ್ ಆಳ್ವಾ ಪರವಾಗಿ ಇಡೀ ಸಾಂಸ್ಕೃತಿಕ ವಲಯವಿದ್ದು, ಕಲಾವಿದರು ಆಳ್ವಾ ಪರ ಗಟ್ಟಿ ದ್ವನಿ ಎತ್ತಬೇಕಿದೆ ಎಂದು ಖ್ಯಾತ ವಿಮರ್ಶಕ, ಕಲಾವಿದ ಪ್ರಭಾಕರ್ ಜೋಷಿ ಹೇಳಿದರು. ಮಂಗಳೂರಿನಲ್ಲಿ ನಡೆದ ನಾಡಸಿರಿಯ ಧ್ವನಿ ಆಳ್ವರೊಂದಿಗೆ ನಾವು ಎನ್ನುವ ಪರಿಕಲ್ಪನೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ನಡೆಸಿರುವುದು ಎಲ್ಲರಲ್ಲೂ ವಿಷಾದ ಮೂಡಿಸಿದೆ. ಆದರೆ ಈ ವಿಚಾರದಲ್ಲಿ ವಿನಾ ಕಾರಣ ಆಳ್ವಾರನ್ನು ಸಿಕ್ಕಿಸಿ ಹಾಕುವ ಪ್ರಯತ್ನಕ್ಕೆ ನಮ್ಮ ವಿರೋಧವಿದೆ ಎಂದ ಅವರು ಕಲೆ, ಸಾಹಿತ್ಯ , ಸಂಸ್ಕೃತಿ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಮೂಡಬಿದಿರೆಯನ್ನು ಪರಿಚಯಿಸಿದಂತಹ ಡಾ. ಮೋಹನ್ ಆಳ್ವರನ್ನು ಅವರಿಗೆ ಸಂಬಂಧವೇ ಪಡದ ವಿಚಾರದಲ್ಲಿ ಸಿಲುಕಿಸಿ ಅವರ ಮೇಲೆ  ಆರೋಪ ಹೊರಿಸುವ ಪ್ರಯತ್ನಕ್ಕೆ ಸಮಾಜ ಅವಕಾಶ ಕೊಡಬಾರದು ಎಂದರು. ಕೆಲವು ವಿಘ್ನ ಸಂತೋಷಿಗಳು ಈ ವಿಚಾರವನ್ನೇ ಇಟ್ಟುಕೊಂಡು ಆಳ್ವಾರ ಚಾರಿತ್ರ್ಯ ವಧೆ ನಡೆಸುವುದು ಅಕ್ಷಮ್ಯ ಅಪರಾಧ ಎಂದು ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಇಡೀ ಸಾಂಸ್ಕೃತಿಕ ವಲಯವೇ ಆಳ್ವಾ ಪರವಾಗಿ ಧ್ವನಿ ಎತ್ತಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ವೇದಿಕೆಯಲ್ಲಿದ್ದ ಆನೇಕ ಗಣ್ಯರು  ಡಾ . ಮೋಹನ್ ಆಳ್ವಾ ಪರ, ಅವು ಸಾಂಸ್ಕೃತಿಕ, ಶೈಕ್ಷಣಿಕ ಕೊಡುಗೆಗಳ ಬಗ್ಗೆ ಮಾತನಾಡಿದರು. ಸಾಂಸ್ಕೃತಿಕ ರಂಗಕ್ಕೆ ವರ್ಷಕ್ಕೆ ಮೋಹನ್ ಆಳ್ವ ಸುಮಾರು 12 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ನಾಲ್ಕು ಸಾವಿರ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ, 600 ಬಡ ವಿದ್ಯಾರ್ಥಿಗಳಿಗೆ ಕಲೆ, ನೃತ್ಯವನ್ನು ಒಂದು ರೂಪಾಯಿ ಪಡೆಯದೇ ನೀಡುತ್ತಿದ್ದು ವಿನಾ ಕಾರಣ ಮೋಹನ್ ಆಳ್ವ ಅವರ ಹೆಸರನ್ನು ಕೆಡಿಸುವವರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಎಂದರು. ನಿವೃತ್ತ ಸೈನಿಕರ ಸಂಘದ ಪರವಾಗಿ ಬ್ರಿಗೇಡಿಯರ್  ಐ.ಎನ್.ರೈ, ಪ್ರದೀಪ್ ಕುಮಾರ್ ಕಲ್ಕೂರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Advertisement
Click to comment

You must be logged in to post a comment Login

Leave a Reply