WhatsApp Image 2017-07-12 at 10.01.09 AMಜುಲೈ 12 . ಜುಲೈ 11 ರಂದು ಮಂಗಳೂರಿನ ಆರ್ ಪಿಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ 52 ಕೆಜಿ ತಂಬಾಕು ಪದಾರ್ಥ ವಶಪಡಿಸಿಕೊಂಡಿದ್ದಾರೆ. ಆರ್ ಪಿಎಫ್ ಸಬ್ ಇನ್ಸಪೆಕ್ಟರ್ ಭರತ್ ರಾಜ್ ಸಿ.ಎಂ ಹಾಗೂ ಎಎಸ್ ಐ ಬಿನೋಯ್ ಕುರಿಯನ್ ಸೇರಿದಂತೆ ನಡೆಸಲಾದ ದಾಳಿಯಲ್ಲಿ ರೈಲು ಗಾಡಿ ಸಂಖ್ಯೆ 16630 ರೈಲಿನಲ್ಲಿ ಅಕ್ರಮವಾಗಿ ತಂಬಾಕು ಪದಾರ್ಥ ಸಾಗಿಸುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿದಾಗ ಸುಮಾರು 52 ಕೆಜಿ ತಂಬಾಕು ಪದಾರ್ಥಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳ ಬೆಲೆ 52 ಸಾವಿರ ರೂಪಾಯಿ ಅಂದಾಜಿಸಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು  ಮುಂದಿನ ವಿಚಾರಣೆಗಾಗಿ ಕಾಸರಗೋಡು ಜಿಲ್ಲೆಯ ಅಬಕಾರಿ ಇಲಾಖೆ ಗೆ ಹಸ್ತಾಂತರಿಸಲಾಗಿದೆ.