Connect with us

DAKSHINA KANNADA

ಅಶ್ರಫ್, ವಿನಾಯಕ್ ಬಾಳಿಗ ಮತ್ತಿತರ ಪ್ರಕರಣಗಳು ಎನ್ ಐ ಎ ಗೆ ನೀಡಲು ಒತ್ತಾಯ ಯಾಕಿಲ್ಲ : ಖಾದರ್ ಪ್ರಶ್ನೆ

ಮಂಗಳೂರು,ಜುಲೈ.20 : ಸಂಸದೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪಟ್ಟಿ ಬೇಜವಾವ್ದಾರಿತನ ಆಧಾರರಹಿತವಾಗಿದೆ. ಸುಳ್ಳು ಪಟ್ಟಿಯನ್ನು ಕೇಂದ್ರ ಗೃಹ ಸಚಿವರಿಗೆ ಕಳುಹಿಸಿದ್ದಾರೆ,ಸಂಸದೆಯಾಗಿ ದೇಶ, ರಾಜ್ಯದ ಕಾನೂನನ್ನು ಶೋಭಾ ಕರಂದ್ಲಾಜೆ ತಿಳಿದುಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ವಾಗ್ದಾಳಿ ವದೆಸಿದ್ದಾರೆ.


ಮಂಗಳೂರಿನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಬಿಜೆಪಿಯವರೇ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಲೇವಡಿ ಮಾಡಿದರು. ಶೋಭಾ ಕರಮದ್ಲಾಜೆ ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲೂ ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ ಆದರೆ ವಿಧಾನಸಭೆಯಲ್ಲಿ ಬಿಜೆಪಿ ಯಾವ ಮುಖಂಡರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದರು. ಬೆಂಗಳೂರಿನ ಶಿವಾಜಿ ನಗರದಲ್ಲಿ ನಡೆದಿದ್ದ ಆರ್ ಎಸ್ ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ರಾಜ್ಯ ಸರ್ಕಾರವೇ ನೀಡಿದೆ. ಎನ್ ಐ ಎ ಪ್ರಕರಣವನ್ನು ನೀಡಲು ಕೆಲವು ಮಾನದಂಡಗಳಿವೆ. ಆಂತರಿಕ ಭದ್ರತೆ ಹಾಗು ಭಯೋತ್ಪಾದಕ ಚಡುವಟಿಕೆಗಳ ವಿಚಾರದಲ್ಲಿ ತನಿಖೆಯನ್ನು ಎನ್ ಐ ಎ ಗೆ ವಹಿಸ ಬಹುದು ಆದರೆ ಎಲ್ಲಾ ಕೊಲೆ ಪ್ರಕರಣವನ್ನು ಎನ್ ಐ ಎ ಗೆ ವಹಿಸಲು ಆಗುವುದಿಲ್ಲ ಎಂದು ಅವರು ಹೇಳಿದರು.
ಅಶ್ರಫ್, ವಿನಾಯಕ್ ಬಾಳಿಗ, ಪ್ರಶಾಂತ್ ಪೂಜಾರಿ ಕೊಲೆ ಬಗ್ಗೆ ಎನ್ ಐಎ ತನಿಖೆಗೆ ನೀಡುವಂತೆ ಶೋಭಾ ಕರಂದ್ಲಾಜೆ ಯಾಕೆ ಕೇಳುತ್ತಿಲ್ಲ ಆದರೆ ಕೇವಲ ಶರತ್ ಮಡಿವಾಳ ಪ್ರಕರಣ ಮಾತ್ರ ಎನ್ ಐಎಗೆ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು. ಜವಾಬ್ದಾರಿ ಸ್ಥಾನದಲ್ಲಿರು ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಆದಾರ ರಹಿತ ಹೇಳಿಕೆ ಗಳಿಂದ ಜನರನ್ನು ಹಾಗು ಪೊಲೀಸ್ ಅಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸುವುದು ಬೇಡ ಎಂದು ಅವರು ಹೇಳಿದರು.

Advertisement
Click to comment

You must be logged in to post a comment Login

Leave a Reply