Connect with us

    DAKSHINA KANNADA

    ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿ: ಭದ್ರತೆಯ ವೈಫಲ್ಯವೇ ಕಾರಣ-ಎಸ್.ಡಿ.ಪಿ.ಐ

    SDPIಜುಲೈ 11:  ಅಮರನಾಥ ಯಾತ್ರಿಕರ ಮೇಲೆ ಸೋಮವಾರ ರಾತ್ರಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಮಹಿಳೆಯರು ಸೇರಿದಂತೆ 7ಜನರು ಮೃತಪಟ್ಟಿದ್ದು, 32ಜನರು ಗಾಯಗೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ ಮತ್ತು ಕೇಂದ್ರ ಸರಕಾರದ ವೈಫಲ್ಯದ ಬಗ್ಗೆ ಖೇಧ ವ್ಯಕ್ತಪಡಿಸಿದೆ.

    17ವರ್ಷದ ಬಳಿಕ ಅಮರನಾಥ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿಯಾಗಿದೆ. ದಾಳಿಯ ಬಗ್ಗೆ ಗುಪ್ತಚರ ಇಲಾಖೆಗೆ ಮುನ್ಸೂಚನೆ ಇದ್ದೂ, ಅತ್ಯಂತ ಭದ್ರತೆಯ ಮಧ್ಯೆಯೂ ದಾಳಿ ನಡೆದಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದಾಳಿಯ ಹಿಂದಿರುವ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಕ್ಷವು ಒತ್ತಾಯಿಸುತ್ತದೆ. ಹಾಗೂ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತದೆ.

    ಈ ದಾಳಿಯು ಅತ್ಯಂತ ಅಮಾನವೀಯವಾದ ಕೃತ್ಯವಾಗಿದೆ. ಇದು ಭದ್ರತಾ ವೈಫಲ್ಯವಾಗಿದೆ. ಭದ್ರತೆಯಲ್ಲಿಯಾದಂತಹ ವೈಫಲ್ಯವನ್ನು ಪುನರ್ ಪರಿಶೀಲಿಸಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ. ಈ ದಾಳಿಯ ಹೊಣೆಯನ್ನು ಕೇಂದ್ರ ಸರಕಾರ ಹೊರಬೇಕು.

    ದಾಳಿಯಿಂದ ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತಿದ್ದೇವೆ ಹಾಗೂ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ . ನಾಗರಿಕ ಸಮಾಜದಲ್ಲಿ ಅಮಾಯಕರ ಮೇಲೆ ನಡೆಯುವಂತಹ ಇಂತಹ ಅಮಾನವೀಯ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ಹಾಗೂ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ದುಃಖವನ್ನು ಎಸ್.ಡಿ.ಪಿ.ಐ ರಾಜ್ಯಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಪ್ರಕಟಣೆಯ ಮೂಲಕ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply