Connect with us

  UDUPI

  ಅನುಭವದಿಂದ ದಕ್ಷತೆ ವೃದ್ಧಿಸುತ್ತದೆ- ಜಿಲ್ಲಾ ನ್ಯಾಯಧೀಶರು

  ಉಡುಪಿ, ಆಗಸ್ಟ್ 7 – ಯಾವುದೇ ಕೆಲಸದಲ್ಲಿ ಹೆಚ್ಚಿನ ಅನುಭವಗಳಿಸುವುದರಿಂದ ಕಾರ್ಯ ನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಾಗಲಿದ್ದು , ಹೆಚ್ಚಿನ ಜ್ಞಾನ ವೃದ್ದಿಸುತ್ತದೆ, ಈ ನಿಟ್ಟಿನಲ್ಲಿ ತರಬೇತಿಗಳು ಹೆಚ್ಚಿನ ಅನುಭವಗಳನ್ನು ನೀಡುತ್ತವೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಟಿ ತಿಳಿಸಿದ್ದಾರೆ.
  ಅವರು ಭಾನುವಾರ , ಉಡುಪಿ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಉಡುಪಿ ಹಾಗೂ ವಕೀಲರ ಸಂಘ (ರಿ) ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ , ಮೂಲಭೂತ ಕರ್ತವ್ಯಗಳು, ಸರ್ಕಾರಿ ನೌಕರರ ಜವಾಬ್ದಾರಿಗಳು, ದೈನಂದಿನ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರಿ ನೌಕರರು ಎದುರಿಸಬೇಕಾದ ಸಮಸ್ಯೆಗಳು ಹಾಗೂ ಪರಿಹಾರ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

  ಕಾಲಕಾಲಕ್ಕೆ ನೀಡುವ ತರಬೇತಿಗಳಿಂದ ನೌಕರರಲ್ಲಿ ಕಾರ್ಯ ಕ್ಷಮತೆ ಹೆಚ್ಚಲಿದ್ದು, ಹೊಸ ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಿದೆ ಅಲ್ಲದೇ ಹೊಸದಾಗಿ ನೇಮಕಗೊಂಡ ನೌಕರರಿಗೆ ಉತ್ತಮ ತರಬೇತಿ ದೊರೆಯಲಿದೆ, ಸರ್ಕಾರಿ ನೌಕರರು ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು, ಅಶಿಸ್ತಿನೊಂದಿಗೆ ಯಾವುದೇ ಸಂದರ್ಭದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ನ್ಯಾಯಾಧೀಶರು ಹೇಳಿದರು.
  ಉಡುಪಿ ಜಿಲ್ಲೆಯಲ್ಲಿ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆಯ ಎಲ್ಲಾ ನೌಕರರ ಉತ್ತಮ ಸಹಕಾರದಿಂದ , ಇಡೀ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಜಿಲ್ಲೆಯಲ್ಲಿ ಶೀಘ್ರವಾಗಿ ವಿಲೇವಾರಿ ಮಾಡುತ್ತಿದ್ದು, ಉಚ್ಛ ನ್ಯಾಯಾಯಲವು ಜಿಲ್ಲಾ ನ್ಯಾಯಾಲಯಗಳಿಗೆ ನಿಗಧಿಗೊಳಿಸಿರುವ ಗುರಿ ಪ್ರಮಾಣ 10 ಆಗಿದ್ದು, ಉಡುಪಿಯಲ್ಲಿ 16 ಪ್ರಮಾಣದಲ್ಲಿ ಕಾರ್ಯ ಸಾಧನೆಯಾಗುತ್ತಿದ್ದು, ಜಿಲ್ಲೆಯ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ, ಜಡ್ಜ್ ಮೆಂಟ್ ಗಳ ಅಫ್ ಲೋಡಿಂಗ್ ಹಾಗೂ ಅನ್ ಡೀಡ್ ಕೇಸ್ ನಲ್ಲಿಯೂ ಸಹ ಪ್ರಥಮ ಸ್ಥಾನದಲ್ಲಿದೆ , ಜಿಲ್ಲೆಯಲ್ಲಿ 13 ಜನ ನ್ಯಾಯಧೀಶರಿದ್ದು, 20 ಮಂದಿ ನಿರ್ವಹಿಸುವುವಷ್ಟು ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ನ್ಯಾಯಧೀಶರು ತಿಳಿಸಿದರು.
  ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್, ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಲತಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಡಿ.ವಿ ಹೆಗ್ಡೆ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply