Connect with us

UDUPI

ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ಅಮೇರಿಕ ಭೇಟಿ

ಉಡುಪಿ, ಸೆಪ್ಟಂಬರ್ 8 : ನಾವಿಕ ವಿಶ್ವ ಕನ್ನಡ ಸಮಾವೇಶ ಹಾಗೂ ಮತ್ತಿತರ ಅನಿವಾಸಿ ಭಾರತೀಯ/ಕನ್ನಡ ಒಕ್ಕೂಟಗಳ ಕಾರ್ಯಕ್ರಮಗಳ ಮೇರೆಗೆ ಅಮೇರಿಕಾ ಪ್ರವಾಸದಲ್ಲಿರುವ ಡಾ.ಆರತಿ ಕೃಷ್ಣರವರು ಅಲ್ಲಿನ ಭಾರತದ ರಾಯಭಾರಿಯಾದ ನವತೇಜ್ ಸರ್ನಾ ರವರನ್ನು ಭೇಟಿ ಮಾಡಿದರು.
ವಿದ್ಯಾಭ್ಯಾಸಕ್ಕೆಂದು ತೆರಳಿ ಪ್ರಾಯೋಗಿಕ ತರಬೇತಿಯನ್ನು ಮುಗಿಸಿದ ಪದವೀಧರರಿಗೆ ಉದ್ಯೋಗ ದೊರೆಯುವವರೆಗೂ ಎದುರಿಸುತ್ತಿರುವ ವೀಸಾ ವಿಸ್ತರಣೆ ಸಮಸ್ಯೆ ಹಾಗೂ ಕರ್ನಾಟಕದಿಂದ ತೆರಳುವ ವಿದ್ಯಾರ್ಥಿಗಳ ಉದ್ಯೋಗವಕಾಶ ಕ್ರಮೇಣ ಕುಂಠಿತವಾಗುವ ಬಗ್ಗೆ ಮತ್ತು ಅಮೇರಿಕಾದ ನೂತನ ವೀಸಾ ನೀತಿಗಳಿಂದ ಭಾರತೀಯ/ಕನ್ನಡಿಗರ ಮೇಲಾಗುವ ಪರಿಣಾಮಗಳು ಹಾಗೂ ಭಾರತ ಅಮೇರಿಕಾ ದೇಶಗಳ ಸಂಬಂಧ ಕುರಿತು ಚರ್ಚಿಸಿದರು.
ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ಸ್ಥಾನ ವಹಿಸಿಕೊಳ್ಳುವ ಮುನ್ನ ಡಾ.ಆರತಿ ಕೃಷ್ಣರವರು ಅಮೆರಿಕಾ ರಾಯಭಾರಿ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Advertisement
Click to comment

You must be logged in to post a comment Login

Leave a Reply