Connect with us

    DAKSHINA KANNADA

    ಅಕ್ರಮ ಸಂಬಂಧ ಆತ್ಮಹತ್ಯೆಗೆ ಯತ್ನಿಸಿ ಬಾವಿಯೊಳಗೆ ಗರ್ಭಪಾತ- ಐದು ತಿಂಗಳ ನವಜಾತ ಶಿಶು ಸಾವು.

    ಮಂಗಳೂರು : ಅಕ್ರಮ ಸಂಬಂಧದಿಂದ ಗರ್ಭವತಿಯಾದ ಹಿನ್ನಲೆ ಯುವತಿಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.
    ಮಂಗಳೂರು ತಾಲೂಕಿನ ಮೂಡಬಿದ್ರೆ ಯ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯು ಅಕ್ರಮ ಸಂಬಂಧದಿಂದ 5 ತಿಂಗಳ ಗರ್ಭಿಣಿಯಾಗಿದ್ದಳು. ಈ ಹಿನ್ನಲೆಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾಳೆ. ಈ ಘಟನೆ ಕಳೆದ ಭಾನುವಾರ ನಡೆದಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ ಪರಿಣಾಮ ಐದು ತಿಂಗಳ ಗರ್ಭವತಿಯಾಗಿದ್ದ ಯುವತಿ ಬಾವಿಯೊಳಗೆಯೇ ಗರ್ಭಪಾತವಾಗಿತ್ತು. ಇಂದು ಬಾವಿಯೊಳಗೆ ಐದು ತಿಂಗಳ ನವಜಾತ ಶಿಶುವಿನ ಶವಪತ್ತೆಯಾದ ಹಿನ್ನಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply