Connect with us

    DAKSHINA KANNADA

    ಅಕ್ರಮ ಗೋಸಾಗಾಟ ತಡೆದ ಕಾರ್ಯಕರ್ತರ ಮೇಲೆ ಕೊಲೆಯತ್ನ ಪ್ರಕರಣ- ಹಿಂದೂ ಜಾಗರಣ ವೇದಿಕೆ ಖಂಡನೆ..

    ಪುತ್ತೂರು,ಅಗಸ್ಟ್17: ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯಪದವಿನಲ್ಲಿ ನಡೆದ ಅಕ್ರಮ ಗೋಸಾಗಾಟ ಪತ್ತೆ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕೊಲೆಯತ್ನ ಕೇಸು ದಾಖಲಿಸಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ. ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಸುಳ್ಯಪದವಿನಲ್ಲಿ ನಡೆದ ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಕಾರ್ಯಕರ್ತರು ತಕ್ಷಣವೇ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಕ್ರಮ ಗೋಸಾಗಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೋಲೀಸ್ ವಶಕ್ಕೂ ನೀಡಿದ್ದು, ಪೋಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ಅವರ ಮೇಲೆ ಕಳ್ಳತನದ ಕೇಸು ಹಾಕಿ ಬಿಟ್ಟಿದ್ದಾರೆ. ಆದರೆ ಗೋಸಾಗಾಟವನ್ನು ಪತ್ತೆಹಚ್ಚಿದ ಕಾರ್ಯಕರ್ತರ ಮೇಲೆ ಕೊಲೆಯತ್ನ ಕೇಸು ದಾಖಲಿಸಿರುವುದು ಹಿಂದೂ ಸಂಘಟನೆಗಳನ್ನು ಮಟ್ಟಹಾಕಲು ಸರಕಾರ ಪೋಲೀಸ್ ಇಲಾಖೆಯನ್ನು ಬಳಸುತ್ತಿರುವುದಕ್ಕೆ ನಿದರ್ಶನ ಎಂದು ಅವರು ಆರೋಪಿಸಿದರು. ಅಲ್ಲದೆ ಪೋಲೀಸರು ವಶಕ್ಕೆ ಪಡೆದುಕೊಂಡ ಕಾರ್ಯಕರ್ತನಿಗೆ ಕಾನೂನು ನೆರವು ನೀಡಲು ಬಂದ ವಕೀಲರ ಮೇಲೂ ಕೊಲೆಯತ್ನ ದಾಖಲಿಸುವುದು ಖಂಡನೀಯವಾಗಿದ್ದು, ಪುತ್ತೂರು ಗ್ರಾಮಾಂತರ ಪೋಲೀಸರ ಈ ಕ್ರಮದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಒಂದು ವೇಳೆ ಇದಕ್ಕೆ ಸ್ಪಂದನೆ ದೊರೆಯದೇ ಹೋದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply