LATEST NEWS
ಹದಿನೈದು ಮಂದಿ ಸಾಧಕರಿಗೆ 2017ರ ಆಳ್ವಾಸ್ ನುಡಿಸಿರಿ ಪುರಸ್ಕಾರ
ಹದಿನೈದು ಮಂದಿ ಸಾಧಕರಿಗೆ 2017ರ ಆಳ್ವಾಸ್ ನುಡಿಸಿರಿ ಪುರಸ್ಕಾರ
ಮಂಗಳೂರು ನವೆಂಬರ್ 17: ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನ 2017ರ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿದ 15 ಮಂದಿ ಸಾಧಕರಿಗೆ `ಆಳ್ವಾಸ್ ನುಡಿಸಿರಿ 2017′ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆಮಾಡಲಾಗಿದೆ.
ಬಿಷಪ್ ಹೆನ್ರಿ ಡಿ’ಸೋಜ, ಎಚ್.ಎಸ್.ದೊರೆಸ್ವಾಮಿ, ನಾಡೋಜಎನ್.ಸಂತೋಷ್ ಹೆಗ್ಡೆ,ಪ್ರೊ.ತೇಜಸ್ವಿ ಕಟ್ಟೀಮನಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ವಿಜಯಾದಬ್ಬೆ, ಪ್ರೊ. ಕೆ.ಬಿ.ಸಿದ್ದಯ್ಯ, ಪ್ರೊ.ಜಿ.ಎಚ್. ಹನ್ನೆರಡುಮಠ, ಪ್ರೊ.ಬಿ.ಸುರೇಂದ್ರರಾವ್, ಡಾ. ಎಂ. ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕøತ ಗಿರೀಶ್ ಭಾರದ್ವಾಜ್, ಪದ್ಮರಾಜದಂಡಾವತಿ, ರತ್ನಮಾಲಾ ಪ್ರಕಾಶ್, ಡಾ.ತೋನ್ಸೆ ವಿಜಯ್‍ಕುಮಾರ್ ಶೆಟ್ಟಿ ಹಾಗೂ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅದ್ಯಕ್ಷ ಡಾ.ಎಂ ಮೋಹನ ಆಳ್ವ ಮಾಹಿತಿ ನೀಡಿದ್ದಾರೆ.