UDUPI
ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ) ಯೋಜನೆ ಉದ್ಘಾಟನೆ
ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ) ಯೋಜನೆ ಉದ್ಘಾಟನೆ
ಉಡುಪಿ, ಅಕ್ಟೋಬರ್ 16: ಗೃಹ ವ್ಯವಹಾರಗಳ ಸಚಿವಾಲಯ, ಭಾರತ ಸರಕಾರ ಮತ್ತು ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕದ ಪ್ರತೀ ಜಿಲ್ಲೆಯ ಪ್ರೌಢ ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರನ್ನು ಪ್ರಜಾಪ್ರಭುತ್ವ ಸಮಾಜದ ಭವಿಷ್ಯದ ನಾಯಕರಂತೆ ವಿಕಸನಗೊಳಿಸಲು ಹಾಗೂ ಅವರಲ್ಲಿ ಕಾನೂನು, ಶಿಸ್ತು, ನಾಗರೀಕ ಜ್ಞಾನ, ಸಮಾಜದ ದುರ್ಬಲ ವರ್ಗಗಳಿಗೆ ಪರಾನುಭೂತಿ ಮತ್ತು ಪ್ರತಿರೋಧ ಸಾಮಾಜಿಕ ದುಷ್ಪರಿಣಾಮಗಳಿಗೆ ಪ್ರತಿರೋಧ ಶಕ್ತಿಯನ್ನು ವೃದ್ಧಿಸಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ) ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ, ಬ್ರಹ್ಮಾವರ ವಲಯದ ಆವರ್ಸೆ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಪಿ.ಸಿ. ಯೋಜನೆಯನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಪೊಲಿಸ್ ಉಪಾಧೀಕ್ಷ್ಷಕರಾದ ಕುಮಾರಸ್ವಾಮಿ ಉದ್ಘಾಟಿಸಿದರು, ಆವರ್ಸೆ ಸರಕಾರಿ ಪ್ರೌಢಶಾಲೆಯ ಶಾಲಾ ಮುಖ್ಯೋಪಾಧ್ಯಾಯರು ಅಧ್ಯಕ್ಷತೆ ವಹಿಸಿದ್ದರು.