Connect with us

    ಸಧೃಡ ಆರೋಗ್ಯಕ್ಕೆ ಲೋಕಲ್ ಕ್ಯಾಂಡಿ ಚಿಕ್ಕಿ

    groundnut chikkiಬಹುಷಃ ಚಾಕೊಲೇಟ್ ತಿನ್ನದವರೇ ಇಲ್ಲ. ಮಕ್ಕಳಿಗಂತೂ ಚಾಕೊಲೇಟ್ ಅಚ್ಚು ಮೆಚ್ಚು. ಚಾಕೊಲೇಟ್ ಅನ್ನು ಕೊಕೊ ಮತ್ತು ಸಕ್ಕರೆ ಉಪಯೋಗಿಸಿ ತಯಾರಿಸಲಾಗುತ್ತದೆ. ನಾವು ತಿನ್ನುವ ಸಿಹಿ ಚಾಕೊಲೇಟ್ ನಲ್ಲಿ ಸಕ್ಕರೆ, ಪಿಷ್ಟ ಮತ್ತು ಫ್ಯಾಟ್ ಹೇರಳವಾಗಿದೆ. ಚಾಕೊಲೇಟ್ ನಲ್ಲಿ ಇರುವ ವಿಟಮಿನ್ಗಳಾದ A, B1, B2, B3, C, E ಮತ್ತು anti-oxidant, ಮುಂತಾದವುಗಳು ಆರೋಗ್ಯಕ್ಕೆ ಒಳ್ಳೆಯವು. ಆದರೆ ಅದರಲ್ಲಿರುವ ಸಕ್ಕರೆ, ಪಿಷ್ಟ ಮತ್ತು ಫ್ಯಾಟ್ ನಮ್ಮ ಶರೀರದಲ್ಲಿ ಕೊಬ್ಬಿನ ಶೇಖರಣೆ ಮಾಡುತ್ತವೆ. ಕೊಬ್ಬಿನ ಶೇಖರಣೆ ಮಧುಮೇಹ, ಸಂಧಿ ವಾತ, ಹೃದ್ರೋಗ ಮುಂತಾದ ಕರೆಯದೇ ಬರುವ ಅತಿಥಿಗಳಿಗೆ ಆಹ್ವಾನ ಕೊಡುತ್ತದೆ.
    ಚಿಕ್ಕಿ ಒಂದು ಭಾರತೀಯ ಮೂಲದ ಲೋಕಲ್ ಕ್ಯಾಂಡಿ. ಚಿಕ್ಕಿಗೆ ಬೇಕಾಗುವ ಕಚ್ಚಾ ವಸ್ತುಗಳು ಬೆಲ್ಲ ಮತ್ತು ಕಡ್ಲೆ. ಚಿಕ್ಕಿಯಲ್ಲಿ ಸಕ್ಕರೆಯ ಬದಲು ಬೆಲ್ಲದ ಉಪಯೋಗ ಮಾಡುವುದರಿಂದ ಅದರಲ್ಲಿ ಸಿಹಿಯ ಅಂಶ ಕಡಿಮೆ. ಬೆಲ್ಲ ಮತ್ತು ಕಡ್ಲೆ ಯಲ್ಲಿ ಇರುವ ನಾರು ಪದಾರ್ಥಗಳು ಚಿಕ್ಕಿಯಲ್ಲಿ ಪಿಷ್ಟ ಮತ್ತು ಕೊಬ್ಬಿನ ಅಂಶದ ಪ್ರಮಾಣವನ್ನು ತಗ್ಗಿಸುತ್ತದೆ. ಕಡ್ಲೆಯಲ್ಲಿ ಇರುವ oleic acid ನಂತಹ mono-unsaturated fatty acid ಗಳು ಶರೀರದ ಕೆಟ್ಟ ಕೊಬ್ಬನ್ನು (LDL) ತಗ್ಗಿಸುವಲ್ಲಿ ಸಹಕಾರಿ. ಕಡ್ಲೆಯಲ್ಲಿ ಇರುವ resveratrol ನಂತಹ anti-oxidant ಗಳು ಹೃದ್ರೋಗ, ಮೆದುಳಿನ ರೋಗ (ವಾತ/stroke) ಮತ್ತು ನರಗಳ ಕಾಯಿಲೆ ಯನ್ನು ತಡೆಗಟ್ಟಲು ಸಹಕಾರಿ. ಇದಲ್ಲದೆ ಕಡ್ಲೆ ಯಲ್ಲಿ riboflavin, niacin, thiamine, pantothenic acid, vitamin B-6, and folate ಮುಂತಾದ ಶರೀರಕ್ಕೆ ಅಗತ್ಯವಾದ ವಿಟಮಿನ್ ಗಳು ಕೂಡ ಇವೆ. ಇದಲ್ಲದೆ, ಕಡ್ಲೆಯು copper, manganese, potassium, calcium, iron, magnesium, zinc, and selenium ನಂತಹ mineral ಗಳ ಭಂಡಾರವೂ ಹೌದು. ಬೆಲ್ಲದಲ್ಲಿ ಇರುವ calcium ನಮ್ಮ ಮೂಳೆಗಳಿಗೆ ಬಲವನ್ನು ಕೊಟ್ಟರೆ sodium, calcium, potassium ಗಳು ಸ್ನಾಯುಗಳಿಗೆ ಬಲವನ್ನು ಕೊದುತ್ತವೆ. ಬೆಲ್ಲವು ಸಕ್ಕರೆಗಿಂತ ಜಾಸ್ತಿ mineral ಗಳನ್ನು ಹೊಂದಿದೆ ಮತ್ತು ಸಕ್ಕರೆಗಿಂತ ತುಂಬಾ ಕಮ್ಮಿ calorie ಗಳಿಂದ ಕೂಡಿದೆ.
    ಚಾಕೊಲೇಟ್ ಮತ್ತು ಚಿಕ್ಕಿಯು vitamin, mineral ಮತ್ತು anti-oxidant ಗಳನ್ನು ನಮ್ಮ ಶರೀರಕ್ಕೆ ಹೇರಳವಾಗಿ ಒದಗಿಸುತ್ತದೆ. ಆದರೆ ಚಿಕ್ಕಿಯಲ್ಲಿ ಚಾಕೊಲೇಟ್ ಗಿಂತ ಕಡಿಮೆ ಕೊಬ್ಬು, ಪಿಷ್ಟ, calorie ಮತ್ತು ಸಕ್ಕರೆ ಇರುವುದರಿಂದ ಚಾಕೊಲೇಟ್ ಗಿಂತ ಚಿಕ್ಕಿ ಬೆಟರ್.
    ಮುಂದಿನ ಬಾರಿ ಚಾಕೊಲೇಟ್ ತಿನ್ನಬೇಕು ಅನಿಸಿದರೆ ಚಿಕ್ಕಿ ತಿನ್ನಿ!!! ಆರೋಗ್ಯಕ್ಕೂ ಒಳ್ಳೆಯದು ನಮ್ಮ ದೇಶದ ಅರ್ಥ ವ್ಯವಸ್ಥೆಗೂ ಒಳ್ಳೆಯದು.

    Share Information
    Advertisement
    Click to comment

    Leave a Reply

    Your email address will not be published. Required fields are marked *