LATEST NEWS
ಭಗವಾನ್ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಮಾತಾಡಲಿ – ಶೋಭಾ ಕರಂದ್ಲಾಜೆ ಸವಾಲ್
ಭಗವಾನ್ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಮಾತಾಡಲಿ – ಶೋಭಾ ಕರಂದ್ಲಾಜೆ ಸವಾಲ್
ಉಡುಪಿ ನವೆಂಬರ್ 25: ಸಾಹಿತ್ಯ ಸಮ್ಮೇಳನದ ಮಹತ್ವ ಕಡಿಮೆ ಮಾಡಲು ಧರ್ಮಸಂಸದ್ ಆಯೋಜಿಸಲಾಗಿದೆ ಎಂದು ಭಗವಾನ್ ಹೇಳಿಕೆಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಧರ್ಮಸಂಸದ್ ಉಡುಪಿಯಲ್ಲಿಯೇ ನಡೆಯಬೇಕೆಂದು ಒಂದೂವರೆ ವರುಷ ಹಿಂದೆಯೇ ನಿರ್ಧಾರವಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ನಡೆಯಬೇಕೆಂದು ನಿಗದಿಯಾಗಿದ್ದು ಎಂದು ಹೇಳಿದರು. ಈ ರೀತಿಯ ಭಗವಾನ್ ಆರೋಪದಲ್ಲಿ ಯಾವುದೇ ಹುರಿಳಿಲ್ಲ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಬಿಟ್ಟು ಅನಗತ್ಯ ಚರ್ಚೆಗಳು ನಡೆಯುತ್ತಿವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಭಗವಾನ್ ಹಿಂದೂ ಹಾಗೂ ದೇಶ ವಿರೋಧಿ, ಈ ಹಿನ್ನಲೆಯಲ್ಲಿ ಧರ್ಮ ಸಂಸದ್ ಗೆ ಚ್ಯುತಿ ತರುವ ನಿಟ್ಟಿನಲ್ಲಿ ಆರೋಪ ಮಾಡುತ್ತಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ರಾಮನ ಬಗ್ಗೆ ಮಾತನಾಡುವ ಭಗವಾನ್ ಗೆ ತಾಕತ್ತಿದ್ದರೆ ಕುರಾನ್, ಬೈಬಲ್ ಬಗ್ಗೆ ಮಾತಾಡಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದರು.