UDUPI
ಶಿವಯೋಗಿ ಶ್ರೀ ಸಿದ್ಧರಾಮನವರು ಜೀವನಚರಿತ್ರೆಗಳು ನಮಗೆ ಮಾದರಿ :ಮೀನಾಕ್ಷಿ ಮಾಧವ ಬನ್ನಂಜೆ
ಶಿವಯೋಗಿ ಶ್ರೀ ಸಿದ್ಧರಾಮನವರು ಜೀವನಚರಿತ್ರೆಗಳು ನಮಗೆ ಮಾದರಿ :ಮೀನಾಕ್ಷಿ ಮಾಧವ ಬನ್ನಂಜೆ
ಉಡುಪಿ, ಜನವರಿ 16: 12 ನೇ ಶತಮಾನದಲ್ಲಿಯೇ ಅಭಿವೃಧ್ಧಿಯತ್ತ ಚಿತ್ತ ಹರಿಸಿ ಕೆರೆಗಳನ್ನು ಕಟ್ಟಿ ಅಭಿವೃದ್ಧಿಯ ಕಾಯಕದಲ್ಲಿ ತೊಡಗಿಕೊಂಡು ಕರ್ಮಯೋಗಿ ಎನಿಸಿಕೊಂಡವರು ಶ್ರೇಷ್ಠ ವಚನಕಾರ ಶಿವಯೋಗಿ ಶ್ರೀ ಸಿದ್ಧರಾಮನವರು.
ಇಂಥ ವಚನಕಾರರ ಜೀವನಚರಿತ್ರೆಗಳು ನಮಗೆ ಮಾದರಿಯಾಗಬೇಕು ಎಂದು ಉಡುಪಿ ನಗರ ಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿನ ನಳಂದ ಸಭಾಂಗಣದಲ್ಲಿ ನಡೆದ ಶಿವಯೋಗಿ ಶ್ರೀ ಸಿದ್ಧರಾಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ಧರಾಮನವರು ಹಿಂದಿನಕಾಲದಲ್ಲಿಯೇ ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಮಾಡಿ ಕರ್ಮಯೋಗಿ ಎನಿಸಿಕೊಂಡವರು.
ಅವರು ಕೇವಲ ಅಭಿವೃದ್ಧಿಯ ಕೆಲಸಗಳನ್ನು ಮಾತ್ರ ಮಾಡಿದ್ದಲ್ಲದೆ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮೂಡಿಸಲು ಹೊರಟಿದ್ದರು.
ಅವರ ಜೀವನ ಸಾಧನೆ, ಕಾಯಕ, ಅಭಿವೃದ್ಧಿ ಕೆಲಸಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಉಪನ್ಯಾಸಕ ಡಾ.ರಾಜೇಂದ್ರ ಎಸ್.ನಾಯಕ್ ಇವರು ಶಿವಯೋಗಿ ಶ್ರೀ ಸಿದ್ದರಾಮರ ಕುರಿತು ಉಪನ್ಯಾಸ ನೀಡಿದರು.
ನಮ್ಮ ಸಂವಿಧಾನದ ಆಶಯದಂತೆ, ಸಮಾನತೆಯ ಬದುಕನ್ನು ನಮಗೆ ವಚನಕಾರರು 12 ನೇಶತಮಾನದಲ್ಲಿಯೇ ತೋರಿಸಿಕೊಟ್ಟಿದ್ದಾರೆ.
ವಚನ ಚಳವಳಿಗಳಿಂದ ನಮ್ಮ ಸಾಮಾಜಿಕ ಬದುಕು ಅಂದಿನಿಂದಲೇ ಸುಧಾರಣೆಯತ್ತ ಸಾಗಿತ್ತು ಎಂದು ಉಪನ್ಯಾಸಕಾರರು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಗೀತಾ ಶೇಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.
ವಿದೂಷಿ ಎಸ್.ಎಂ.ಮೀನಾಕ್ಷಿ ಇವರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.