LATEST NEWS
ಶಾಸಕ ಮೊಯಿದ್ದಿನ್ ಬಾವಾ ಸೀರೆ ರಾಜಕೀಯ
ಶಾಸಕ ಮೊಯಿದ್ದಿನ್ ಬಾವಾ ಸೀರೆ ರಾಜಕೀಯ
ಮಂಗಳೂರು ಫೆಬ್ರವರಿ 23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಧಾನ ಸಭೆ ಚುನಾನಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸುಗೊಳ್ಳುತ್ತಿದೆ. ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ನಾನಾ ಕಸರತ್ತು ಆರಂಭಿಸಿವೆ. ಈ ನಡುವೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಗೆ ಸೀರೆ ಹಂಚಲಾಗುತ್ತಿದೆ ಎಂಬ ಆರೋಪಿಲಾಗಿದೆ.
ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ ಎಂದು ದೂರ ಲಾಗಿದೆ. ಈ ಕುರಿತ ಫೊಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಹಿನ್ನೆಲೆಯಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು ಬಿಜೆಪಿ ಮುಖಂಡರು ಬಾವಾ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಎಂಬಲ್ಲಿ ಶಾಸಕ ಮೊಯಿದ್ದಿನ್ ಬಾವಾ ಮನೆಗಳ ಹಕ್ಕುಪತ್ರ ವಿತರಿಸಿ ಸೀರೆ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಗುರುಪುರ ದ ಪ್ರತಿ ಮನೆಮನೆಗೆ ತೆರಳಿ ಶಾಸಕ ಬಾವಾ ಸೀರೆ ಹಂಚಿದ್ದಾರೆ ಎಂದು ಹೇಳಲಾಗಿದ್ದು ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಒಂದೊಮ್ಮೆ ಚುನಾವಣಾ ದಿನಾಂಕ ಘೋಷಣೆ ಆದರೆ ನೀತಿ ಸಂಹಿತೆಯ ನಡುವೆ ಈ ಅಕ್ರಮಗಳನ್ನು ನಡೆಸಲು ಕಷ್ಟ ಸಾದ್ಯವಾಗುವ ಕಾರಣ ಶಾಸಕ ಈಗಲೇ ಮತದಾರರಿಗೆ ಆಮಿಷ ಓಡ್ಡಲು ಆರಂಭಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲು ಬಿಜೆಪಿ ಮುಖಂಡರು ತೀರ್ಮಾನಿಸಿದ್ದಾರೆ.