LATEST NEWS
ರಮಾನಾಥ ರೈ ಬಣದ ರಾಜೇಶ್ ಕೊಟ್ಯಾನ್ ವಿರುದ್ದ ಗುಡುಗಿದ ಜನಾರ್ಧನ ಪೂಜಾರಿ
ರಮಾನಾಥ ರೈ ಬಣದ ರಾಜೇಶ್ ಕೊಟ್ಯಾನ್ ವಿರುದ್ದ ಗುಡುಗಿದ ಜನಾರ್ಧನ ಪೂಜಾರಿ
ಮಂಗಳೂರು ಡಿಸೆಂಬರ್ 26: ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹಾಗೂ ಸಚಿವ ರಮಾನಾಥ ರೈ ನಡುವೆ ಇರುವ ಮನಸ್ತಾಪ ಮತ್ತೆ ಬಹಿರಂಗಗೊಂಡಿದೆ. ನಿನ್ನೆ ಮಂಗಳೂರಿನ ಕುದ್ರೋಳಿಯಲ್ಲಿ ನಡೆದ ಗರೋಡಿಯ ಹೊರೆಕಾಣಿಕೆ ಉದ್ಘಾಟನಾ ಸಂದರ್ಭದಲ್ಲಿ ರಮಾನಾಥ ರೈ ಬಣದ ರಾಜೇಶ್ ಕೊಟ್ಯಾನ್ ರನ್ನು ದೀಪ ಬೆಳಗಿಸಲು ಜನಾರ್ಧನ ಪೂಜಾರಿ ಅವರು ತಡೆದಿದ್ದಾರೆ.
ಮಂಗಳೂರಿನ ಗರೋಡಿಯ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ಮೆರವಣಿಗೆ ಯನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ದಿಂದ ಆರಂಭಿಸಲಾಗಿತ್ತು. ಕಾರ್ಯಕ್ರಮವನ್ನು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದ್ದರು.
ಬಳಿಕ ಶಾಸಕ ಜೆ ರ್ ಲೋಬೊ ದೀಪ ಬೆಳಗಿಸಿದರು. ಇದಾದ ಬಳಿಕ ಚಲನ ಚಿತ್ರ ನಟ ರಾಜಶೇಖರ್ ಕೋಟ್ಯಾನ್ ದೀಪ ಬೆಳಗಿಸಲು ಮುಂದಾದಾಗ ಮಾಜಿ ಕೇಂದ್ರ ಸಚಿವ ಜನಾರ್ಧನ್ ಪೂಜಾರಿ ಅವರನ್ನು ತಡೆದರು. ನೀವು ನನ್ನನ್ನು ಅವಾಚ್ಯವಾಗಿ ಬೈದವರ ಪರವಾಗಿ ಇದ್ದೀರಿ, ನೀವು ಮೊದಲು ಹೋಗಿ ದೇವರ ಬಳಿ ತೆರಳಿ ಕ್ಷಮೆ ಕೇಳಿ. ಬಳಿಕ ದೀಪ ಹಚ್ಚಿ ಎಂದು ಹೇಳಿದರು.
ರಮಾನಾಥ ರೈ ಮತ್ತು ಪೂಜಾರಿಯ ನಡುವೆ ಇರುವ ಮನಸ್ತಾಪ ಇನ್ನು ಮುಂದುವರೆದಿದ್ದು ಈ ಘಟನೆಯಿಂದ ಸ್ಪಷ್ಟವಾಗಿದ್ದು, ರಮಾನಾಥ ರೈ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಹಿನ್ನಲೆಯಲ್ಲಿ ರಾಜೇಶ್ ಕೊಟ್ಯಾನ್ ದೀಪ ಬೆಳಗಿಸಲು ಜನಾರ್ಧನ ಪೂಜಾರಿ ತಡೆದಿದ್ದಾರೆ.